ಮೈಸೂರು: ‘ಲಾಕ್ಡೌನ್ ತೆರವಾದ ಬಳಿಕ ರಾಜ್ಯದಲ್ಲಿ ಶೇ 15ರಿಂದ 20ರಷ್ಟು ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಇವುಗಳಲ್ಲಿ ಮಾದಕ ವಸ್ತು ಮತ್ತು ಸೈಬರ್ ಅಪರಾಧಗಳೂ ಸೇರಿವೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಸಿಂಥೆಟಿಕ್ ಸ್ವರೂಪದ ಮಾದಕ ವಸ್ತು ಸಣ್ಣ ಪೇಪರಿನ ರೂಪದಲ್ಲಿ ಅಂಚೆಯ ಮೂಲಕ ರವಾನೆಯಾಗುತ್ತಿವೆ. ಈ ಕುರಿತ ಮಾಹಿತಿಗಳು ‘ಡಾರ್ಕ್ವೆಬ್’ನಲ್ಲಿ ವಿನಿಮಯವಾಗುತ್ತಿವೆ. ಕರ್ನಾಟಕ ಪೊಲೀಸರು ಡಾರ್ಕ್ವೆಬ್ನ್ನು ನಿಯಮಿತವಾಗಿ ಮೊದಲ ಬಾರಿಗೆ ಬೇಧಿಸಿ ಮಾಹಿತಿ ಪಡೆದು, ದಾಳಿಗಳನ್ನು ನಡೆಸುತ್ತಿದ್ದಾರೆ’ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಮಾದಕ ವಸ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಂದು ವರ್ಷದಲ್ಲಿ 15ರಿಂದ 20 ಮಂದಿ ವಿದೇಶಿಯರನ್ನು ಬಂಧಿಸಲಾಗಿದೆ. ‘ಎನ್ಡಿಪಿಎಸ್’ ಕಾನೂನಿನ ನಿಯಮಗಳಿಗೆ ತಿದ್ದುಪಡಿ ತಂದು, ಬಂಧಿತರಿಗೆ ಕನಿಷ್ಠ 1 ವರ್ಷಗಳ ಕಾಲ ಅಥವಾ ತನಿಖೆ ಪೂರ್ಣಗೊಳ್ಳುವವರೆಗೂ ಜಾಮೀನು ಸಿಗದಂತೆ ಮಾಡುವ ಪ್ರಸ್ತಾವ ಇದೆ. ದೇಶದಲ್ಲೇ ಹೆಚ್ಚು ಮಾದಕವಸ್ತುಗಳನ್ನು ಕರ್ನಾಟಕ ಪೊಲೀಸರು ವಶಕ್ಕೆ ಪಡೆದಿದ್ದಾರೆ’ ಎಂದು ತಿಳಿಸಿದರು.

‘ಸೈಬರ್ ಅಪರಾಧ ಪ್ರಕರಣಗಳನ್ನು ಬೇಧಿಸಲು ಬೆಂಗಳೂರಿನ ಪೊಲೀಸರು ‘ಆ್ಯಪ್’ ರೂಪಿಸಿದ್ದಾರೆ. ‘ಎಫ್ಐಆರ್’ ದಾಖಲಾಗುವುದಕ್ಕೂ ಮುನ್ನವೇ ಹಣ ವರ್ಗಾವಣೆಯಾಗುವ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಂಡು, ಒಂದು ತಿಂಗಳಿನಲ್ಲಿ ₹ 40 ಕೋಟಿಯಷ್ಟು ಹಣವು ವಂಚಕರ ಕೈಗೆ ಸಿಗದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ವ್ಯವಸ್ಥೆ ಮೈಸೂರಿನಲ್ಲಿಯೂ ರೂಪಿಸಬೇಕು’ ಎಂದರು.

‘ಸಂಚಾರ ನಿಯಮ ಉಲ್ಲಂಘನೆಯಿಂದ ಸಂಗ್ರಹವಾದ ಹಣವನ್ನು ರಸ್ತೆ ಸುರಕ್ಷತೆಗೆ ಹಾಗೂ ಅಭಿವೃದ್ಧಿಗೆ ಬಳಕೆ ಮಾಡಲು ನೇರವಾಗಿ ಪೊಲೀಸ್ ಇಲಾಖೆಗೆ ನೀಡಬೇಕು’ ಎಂದು ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

‘ಕಾಲೇಜುಗಳು ಆರಂಭವಾದ ಬಳಿಕ ವಿದ್ಯಾರ್ಥಿನಿಯರಿಗೆ ಮಾನಸಿಕ, ದೈಹಿಕ ಸದೃಢತೆ ಕಾಪಾಡಿಕೊಳ್ಳಲು ತರಬೇತಿ ನೀಡಲಾಗುವುದು. ಪೊಲೀಸರ ತರಬೇತಿಗಾಗಿ ‘ನ್ಯಾಷನಲ್ ಡಿಫೆನ್ಸ್ ಅಕಾಡೆಮಿ’ ಮಾದರಿಯಲ್ಲಿ ‘ಆಫಿಸರ್ಸ್ ಟ್ರೈನಿಂಗ್ ಅಕಾಡೆಮಿ’ ಸ್ಥಾಪಿಸಲಾಗುವುದು. ಪೊಲೀಸ್ ತರಬೇತಿಯ ಪಠ್ಯಕ್ರಮ ಬದಲಾವಣೆಗೆ ಸಮಿತಿ ರಚಿಸಲಾಗುವುದು’ ಎಂದು ತಿಳಿಸಿದರು.

‘ಮೇಕೆದಾಟು ಹಾಗೂ ತಮಿಳುನಾಡಿನ ನದಿ ಜೋಡಣೆ ಯೋಜನೆ ಕುರಿತು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಜತೆ ಮಾತುಕತೆ ನಡೆಸಲಾಗಿದೆ. ತಮಿಳುನಾಡಿಗೆ ಬಿಡುವ ನೀರಿನಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಂಡು, ಸುಪ್ರೀಂಕೋರ್ಟ್ ಆದೇಶದ ಪ್ರಕಾರ ನಮ್ಮಲ್ಲೇ ಉಳಿಯುವ ನೀರನ್ನು ಬಳಕೆ ಮಾಡಿಕೊಳ್ಳಲು ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಹೇಳಿದರು.

‘ನಾನೀಗ ಗೃಹ ಸಚಿವ ಮಾತ್ರ. ಮುಖ್ಯಮಂತ್ರಿ ರೇಸ್ನಲ್ಲಿ ನಾನು ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.