ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರಾ: ನಿತ್ಯ ಸಂಜೆ 5.30ರಿಂದ ಅರಮನೆ ವೇದಿಕೆಯಲ್ಲಿ ಸಾಂಸ್ಕೃತಿಕ ವೈವಿಧ್ಯ

ಅ.3ರವರೆಗೆ ನಿತ್ಯ ಸಂಜೆ 5.30ರಿಂದ ಕಾರ್ಯಕ್ರಮ
Last Updated 21 ಸೆಪ್ಟೆಂಬರ್ 2022, 13:29 IST
ಅಕ್ಷರ ಗಾತ್ರ

ಮೈಸೂರು: ದಸರಾ ಮಹೋತ್ಸವದ ಸಾಂಸ್ಕೃತಿಕ ಉಪ ಸಮಿತಿ ವತಿಯಿಂದ ಅಂಬಾವಿಲಾಸ ಅರಮನೆ ಆವರಣದ ವೇದಿಕೆಯಲ್ಲಿ ಸೆ.26ರಿಂದ ಅ.3ರವರೆಗೆ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸೆ.26ರಂದು ಸಂಜೆ 5.30ರಿಂದ ಸಂಜೆ 6ರವರೆಗೆ ನಾದಸ್ವರ– ಯದುನಾಥ್ ಮತ್ತು ಗುರುರಾಜ್ ತಂಡದಿಂದ. ವೀರಭದ್ರ ಕುಣಿತ- ಕಿರಾಳು ಮಹೇಶ ಮತ್ತು ತಂಡದಿಂದ. ಸಂಜೆ 6ಕ್ಕೆ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡುವರು ಮತ್ತು ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ನೆರವೇರಿಸಲಿದ್ದಾರೆ.

ಸಂಜೆ 7ರಿಂದ 8ರವರೆಗೆ ‘ಅಮೃತ ಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮವನ್ನು ಸಪ್ತಸ್ವರ ಕಲಾ ತಂಡದವರು ಪ್ರಸ್ತುತಪಡಿಸಲಿದ್ದಾರೆ. ಬೆಂಗಳೂರಿನ ಕ್ರಿಯೇಷನ್ ತಂಡದಿಂದ ನೃತ್ಯರೂಪಕವಿದೆ. ರಾತ್ರಿ 8ರಿಂದ 9.30ರವರೆಗೆ ಎಚ್.ಆರ್.ಲೀಲಾವತಿ ಅವರಿಂದ ಸುಗಮ ಸಂಗೀತ ಕಾರ್ಯಕ್ರಮವಿದೆ.

ಗಣಪತಿ ಭಟ್ ಹಾಸಣಗಿ:

ಸೆ.27: ಸಂಜೆ 5.30ರಿಂದ 6ರವರೆಗೆ ಕಂಸಾಳೆ ಮಹೇಶ್ ಮತ್ತು ತಂಡ. 6ರಿಂದ 7ರವರೆಗೆ ಇಂದೂ ನಾಗರಾಜು ಮತ್ತು ಲಕ್ಷ್ಮಿ ನಾಗರಾಜು ತಂಡದಿಂದ ಭಕ್ತಿ ಸಂಗೀತ. 7ರಿಂದ 8: ಲಯಾಭಿನಯ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನೃತ್ಯರೂಪಕ-ಲಲಿತಾರ್ಣವ. ರಾತ್ರಿ 8ರಿಂದ 9.30ರವರೆಗೆ ವಿದ್ವಾನ್ ಸಂದೀಪ್ ನಾರಾಯಣ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಸೆ.28: ಸಂಜೆ 5.30ರಿಂದ 6ರವರೆಗೆ ಕರ್ನಾಟಕ ಕಲಾಶ್ರೀ ವಿದ್ವಾನ್ ಸಿ.ರಾಮದಾಸ್ ಅವರಿಂದ ಹಾರ್ಮೋನಿಯಂ,. ಸಂಜೆ 6ರಿಂದ 7ರವರೆಗೆ ಪಂಡಿತ್ ಗಣಪತಿ ಭಟ್ ಹಾಸಣಗಿ ದಾಸರ ಪದ ಪ್ರಸ್ತುತಪಡಿಸಲಿದ್ದಾರೆ. ಸಂಜೆ 7ರಿಂದ 8ರವರೆಗೆ ಸತ್ಯನಾರಾಯಣರಾಜು ಮತ್ತು ತಂಡದಿಂದ ಭರತನಾಟ್ಯ, ರಾತ್ರಿ 8ರಿಂದ 9.30ರವರೆಗೆ ಮುಂಬೈನ ಉಸ್ತಾದ್ ಫಜಲ್ ಖುರೇಷಿ ಅವರಿಂದ ತಬಲ ವಾದನ ಕಾರ್ಯಕ್ರಮವಿದೆ.

ಕರ್ನಾಟಕ ವಾದ್ಯ ಸಂಗೀತಗಳ ಸಮ್ಮಿಲನ:

ಸೆ.29: ಸಂಜೆ 5.30ರಿಂದ 6ರವರೆಗೆ ಪೊಲೀಸ್ ಬ್ಯಾಂಡ್, ಸಂಜೆ 6ರಿಂದ 7ರವರೆಗೆ ಪಂಡಿತ್ ವೆಂಕಟೇಶ್ ಕುಮಾರ್ ಅವರಿಂದ ವಚನ ಗಾಯನ, ಸಂಜೆ 7ರಿಂದ 8ರವರೆಗೆ ಮಧುಲಿತ ಮಹೋಪಾತ್ರ ಮತ್ತು ತಂಡದಿಂದ ಓಡಿಸ್ಸಿ ನೃತ್ಯ, ರಾತ್ರಿ 8ರಿಂದ 9.30ರವರೆಗೆ ಬೆಂಗಳೂರಿನ ಚಕ್ರ ಫೋನಿಕ್ಸ್ ತಂಡದಿಂದ ವಿಶ್ವ ಸಂಗೀತ (ಕರ್ನಾಟಕ ವಾದ್ಯ ಸಂಗೀತಗಳ ಸಮ್ಮಿಲನ) ಕಾರ್ಯಕ್ರಮ ನಡೆಯಲಿದೆ.

ಸೆ.30: ಸಂಜೆ 5.30ರಿಂದ 6ರವರೆಗೆ ಜ್ಞಾನಮೂರ್ತಿ ಮತ್ತು ತಂಡದಿಂದ ಭಕ್ತಿ ಸಂಗೀತ, ಸಂಜೆ 6ರಿಂದ 7ರವರೆಗೆ ಡಾ.ಸುಕನ್ಯಾ ಪ್ರಭಾಕರ್ ಮತ್ತು ತಂಡದವರು ವಾದ್ಯಗಳಲ್ಲಿ ಒಡೆಯರ ಕೃತಿಗಳನ್ನು ಪ್ರಸ್ತುತಪಡಿಸಲಿದ್ದಾರೆ. ಸಂಜೆ 7ರಿಂದ 8ರವರೆ ರೂಪಾ ರಾಜೇಶ ಮತ್ತು ತಂಡದವರು ಕೂಚಿಪುಡಿ ನೃತ್ಯ ಪ್ರದರ್ಶಿಸುವರು. ರಾತ್ರಿ 8ರಿಂದ 9.30ರವರೆಗೆ ಕೋಲ್ಕತ್ತಾದ ವಿದುಷಿ ಕೌಶಿಕಿ ಚಕ್ರವರ್ತಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಲಿದ್ದಾರೆ.

ಅ.1: ಪನ್ನಗ ವಿಜಯಕುಮಾರ್, ವೇದವ್ಯಾಸ ಸೇವಾ ಟ್ರಸ್ಟ್ ಅವರಿಂದ ಜಾನಪದ ಗಾಯನ, ಸಂಜೆ 6ರಿಂದ 7ರವರೆಗೆ ಟಿ.ಎಸ್.ನಾಗಾಭರಣ, ಬೆನಕ ತಂಡದಿಂದ ರಂಗಗೀತೆಗಳು, ಸಂಜೆ 7ರಿಂದ 8ರವರೆಗೆ ಪೊಲೀಸ್ ಬ್ಯಾಂಡ್– ಮಾಸ್ ಬ್ಯಾಂಡ್, ರಾತ್ರಿ 8ರಿಂದ 9.30ರವರೆಗೆ ಬೆಂಗಳೂರಿನ ಮನೋ ಮ್ಯೂಸಿಕ್ ಲೈನ್ಸ್– ಸಿತಾರ್ ಸಿಂಪೋನಿ ನಡೆಯಲಿದೆ.

ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ:

ಅ.2: ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ‘ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ’ ಕಾರ್ಯಕ್ರಮ ನಡೆಯಲಿದೆ. ಸಂಜೆ 6ರಿಂದ 7ರವರೆಗೆ ಕಂಬದ ರಂಗಯ್ಯ ನೇತೃತ್ವದಲ್ಲಿ ವಿವಿಧ ಕಲಾವಿದರಿಂದ ಜನಪದ ಸಂಗೀತ, ಸಂಜೆ 7ರಿಂದ 8ರವರೆಗೆ ಕಿರುತೆರೆ ಕಲಾವಿದೆ ರೂಪಿಕಾ ಮತ್ತು ವಂದನಾ ಸಾರಥ್ಯದಲ್ಲಿ ನೃತ್ಯರೂಪಕ ‘ನವಶಕ್ತಿ ವೈಭವ’ ಪ್ರಸ್ತುತಗೊಳ್ಳಲಿದೆ. ರಾತ್ರಿ 8ರಿಂದ 9.30ರವರೆಗೆ ಮನೋಜ್ ವಶಿಷ್ಠ ಮತ್ತು ಅರುಂಧತಿ ವಶಿಷ್ಠ ತಂಡದಿಂದ ಸಂಗೀತ ವೈವಿಧ್ಯವಿದೆ.

ಅ.3: ಸಂಜೆ 5.30ರಿಂದ 6ರವರೆಗೆ ವಿಶೇಷ ವ್ಯಕ್ತಿಗಳು ಹಾಗೂ ಅಂಗವಿಕಲರಿಂದ ಕಾರ್ಯಕ್ರಮವಿದೆ. ಸಂಜೆ 6ರಿಂದ 7ರವರೆಗೆ ಗಡುಬಗೆರೆ ಮುನಿರಾಜು ಅವರಿಂದ ಜನಪದ ಸಂಗೀತ, ಸಂಜೆ 7ರಿಂದ 8ರವರೆಗೆ ಸ್ಥಳೀಯ ಕಲಾವಿದರಿಂದ ಪಾರಂಪರಿಕ ನೃತ್ಯ ಸಮ್ಮಿಲನ, ರಾತ್ರಿ 8ರಿಂದ 9.30ರವರೆಗೆ ಮುಂಬೈನ ಪದ್ಮಶ್ರೀ ಅನುಪ್ ಜಲೋಟ ಅವರಿಂದ ಗಜಲ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT