ಶನಿವಾರ, ಆಗಸ್ಟ್ 8, 2020
23 °C

ಸಾಮಾಜಿಕ ಹೋರಾಟಗಾರ ಮರಿದಂಡಯ್ಯ ಬುದ್ಧ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇಲ್ಲಿನ ಅಶೋಕಪುರಂನ ನಿವಾಸಿ ಹಾಗೂ ಸಾಮಾಜಿಕ ಹೋರಾಟಗಾರ ಮರಿದಂಡಯ್ಯ ಬುದ್ಧ (57) ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಗಂಗೋತ್ರಿ ಬಡಾವಣೆಯಲ್ಲಿನ ತಮ್ಮ ಸ್ವಗೃಹ ನಿಧನರಾದರು.

ಅವಿವಾಹಿತರಾಗಿದ್ದ ಇವರಿಗೆ ತಾಯಿ ಪುಟ್ಟನಂಜಮ್ಮ ಹಾಗೂ ಮೂವರು ಸೋದರ, ಸೋದರಿಯರು ಇವರಿಗೆ ಇದ್ದಾರೆ.

ಇವರ ಅಂತ್ಯಕ್ರಿಯೆಯು ಶನಿವಾರ ಮಧ್ಯಾಹ್ನ ವಿದ್ಯಾರಣ್ಯಪುರಂನ ರುದ್ರಭೂಮಿಯಲ್ಲಿ ನೆರವೇರಿತು.

ಇವರು ತಮ್ಮ 20ನೇ ವಯಸ್ಸಿನಿಂದಲೇ ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಸಿಪಿಎಂ (ಲಿಬರೇಷನ್) ಪಕ್ಷದಿಂದ ಮೈಸೂರು ಲೋಕಸಭಾ ಸ್ಥಾನಕ್ಕೂ ಇವರು ಒಮ್ಮೆ ಸ್ಪರ್ಧಿಸಿದ್ದರು. ಮೈಸೂರಿನಲ್ಲಿ ಈಚೆಗೆ ನಡೆದ ದಲಿತಪರವಾದ, ಪೌರಕಾರ್ಮಿಕರ ಪರವಾದ ಹಾಗೂ ಸಿಎಎ ವಿರುದ್ಧದ ಚಳವಳಿಗಳಲ್ಲಿ ಸಕ್ರಿಯವಾಗಿ ಇವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.