ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಾಂಗಣ ಕ್ರೀಡಾಂಗಣಕ್ಕೆ ಹೊಸ ರೂಪ

ಎಂಟು ಬ್ಯಾಡ್ಮಿಂಟನ್‌ ಕೋರ್ಟ್‌ಗಳಿಗೆ ಮರದ ನೆಲಹಾಸು
Last Updated 12 ಮೇ 2019, 19:35 IST
ಅಕ್ಷರ ಗಾತ್ರ

ಮೈಸೂರು: ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡುತ್ತಾ ಬಂದಿರುವ ಮೈಸೂರು ವಿಶ್ವವಿದ್ಯಾಲಯದ ಎರಡು ಒಳಾಂಗಣ ಕ್ರೀಡಾಂಗಣಗಳು ವುಡನ್‌ ಫ್ಲೋರಿಂಗ್‌ (ಮರದ ನೆಲಹಾಸು) ಮೂಲಕ ಹೊಸ ರೂಪ ಪಡೆದುಕೊಂಡಿವೆ.

ಮಹಾರಾಜ ಮತ್ತು ಯುವರಾಜ ಕಾಲೇಜಿನ ಒಳಾಂಗಣ ಕ್ರೀಡಾಂಗ ಣಗಳಲ್ಲಿ ಹೊಸದಾಗಿ ಮರದ ಹಾಸು ಹಾಸಲಾಗಿದೆ. ಎರಡು ಕ್ರೀಡಾಂಗ ಣಗಳಲ್ಲಿ ತಲಾ ನಾಲ್ಕು ಬ್ಯಾಡ್ಮಿಂಟನ್‌ ಕ್ರೀಡಾಂಗಣಗಳು ಸಿದ್ದವಾಗಿವೆ.

ಕ್ರೀಡಾಚಟುವಟಿಕೆಗಳು ಆರಂಭವಾ ಗಿದ್ದು, ಬ್ಯಾಡ್ಮಿಂಟನ್‌ ಪ್ರತಿಭೆಗಳು ಪ್ರತಿದಿನ ಇಲ್ಲಿ ತರಬೇತಿ ನಡೆಸುತ್ತಿದ್ದಾರೆ. ಮೈಸೂರು ವಿ.ವಿ. ಬೇಸಿಗೆ ಕ್ರೀಡಾ ಶಿಬಿರವನ್ನು ಇಲ್ಲಿ ಆಯೋಜಿಸಲಾಗಿದೆ.

ಮಹಾರಾಜ ಮತ್ತು ಯುವರಾಜ ಕಾಲೇಜು ವಿದ್ಯಾರ್ಥಿಗಳ ಬಳಕೆಗೆ ಯುಜಿಸಿ ಅನುದಾನದಲ್ಲಿ ಎರಡು ವರ್ಷಗಳ ಹಿಂದೆ ತಲಾ ₹ 1.52 ಕೋಟಿ ವೆಚ್ಚದಲ್ಲಿ ಎರಡು ಕ್ರೀಡಾಂಗಣಗಳು ನಿರ್ಮಾಣಗೊಂಡಿದ್ದವು. ಈ ಹಿಂದೆ ಇಲ್ಲಿ ಮರದ ಹಾಸು ಇತ್ತು. ಆದರೆ ಕಳಪೆ ಕಾಮಗಾರಿಯಿಂದ ಅಲ್ಲಲ್ಲಿ ಕಿತ್ತುಹೋಗಿದ್ದವು.

ಕೇವಲ ಒಂದೂವರೆ ವರ್ಷದಲ್ಲೇ ಮರದ ಫ್ಲೋರಿಂಗ್‌ (ನೆಲಹಾಸು) ಕಿತ್ತುಬಂದಿದ್ದು ಟೀಕೆಗೆ ಗುರಿಯಾಗಿತ್ತು. ಕಳಪೆ ಗುಣಮಟ್ಟದ ಮರಗಳನ್ನು ಬಳಸಲಾಗಿದೆ ಎಂದು ಕ್ರೀಡಾಪಟುಗಳು ಆರೋಪಿಸಿದ್ದರು. ಇದರಿಂದ ಹೊಸದಾಗಿ ಫ್ಲೋರಿಂಗ್‌ ಮಾಡಲು ನಿರ್ಧರಿಸಲಾಗಿತ್ತು.

ಎರಡು ಕ್ರೀಡಾಂಗಣಗಳಲ್ಲಿ ತಲಾ ನಾಲ್ಕರಂತೆ ಎಂಟು ಬ್ಯಾಡ್ಮಿಂಟನ್‌ ಕೋರ್ಟ್‌ಗಳಿಗೆ ಹೊಸದಾಗಿ ಮರದ ಹಾಸು ಹಾಸಲಾಗಿದೆ. ಇತರ ಒಳಾಂಗಣ ಕ್ರೀಡೆಗಳಿಗೂ ಬಳಕೆಯಾಗಲಿವೆ ಎಂದು ಮೈಸೂರು ವಿ.ವಿ ದೈಹಿಕ ಶಿಕ್ಷಣ ನಿರ್ದೇಶಕರಾದ ಪಿ.ಕೃಷ್ಣಯ್ಯ ತಿಳಿಸಿದರು.

‌ಮುಂದಿನ ದಿನಗಳಲ್ಲಿ ಜಿಮ್ನಾಸ್ಟಿಕ್ಸ್ ಒಳಗೊಂಡಂತೆ ವಿವಿಧ ಕ್ರೀಡೆಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತದೆ. ಹೊಸ ಜಿಮ್ನಾಸ್ಟಿಕ್ಸ್‌ ಸಲಕರಣೆಗಳನ್ನು ಅಳ ವಡಿಸಲು ನಿರ್ಧರಿಸಲಾಗಿದೆ ಎಂದರು.

ಮಹಾರಾಜ ಮತ್ತು ಯುವರಾಜ ಕಾಲೇಜು ವಿದ್ಯಾರ್ಥಿಗಳಿಗಾಗಿ ಈ ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದೆ. ಆದ್ದರಿಂದ ಈ ಕಾಲೇಜುಗಳ ವಿದ್ಯಾರ್ಥಿಗಳ ಬಳಕೆಗೆ ಆದ್ಯತೆ ನೀಡಲಾಗುತ್ತದೆ. ಅದೇ ರೀತಿ ವಿ.ವಿಯ ಇತರ ಕ್ರೀಡಾಪಟುಗಳೂ ಈ ಕ್ರೀಡಾಂಗಣ ಬಳಸಲಿದ್ದಾರೆ ಎಂದು ಹೇಳಿದರು.

ಬ್ಯಾಡ್ಮಿಂಟನ್‌ ಅಲ್ಲದೆ ವಾಲಿಬಾಲ್‌, ಬ್ಯಾಸ್ಕೆಟ್‌ಬಾಲ್‌ ಮತ್ತು ಜಿಮ್ನಾಸ್ಟಿಕ್ಸ್‌ ಒಳಗೊಂಡಂತೆ ವಿವಿಧ ಕ್ರೀಡೆಗಳಿಗಾಗಿ ಈ ಎರಡು ಕ್ರೀಡಾಂಗಣಗಳನ್ನು ನಿರ್ಮಿಸಲಾಗಿತ್ತು. 2017ರ ಜನವರಿಯಲ್ಲಿ ಕ್ರೀಡಾಂಗಣ ಉದ್ಘಾಟನೆಯಾಗಿತ್ತು. ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕುಸ್ತಿ ಚಾಂಪಿಯನ್‌ಷಿಪ್‌ ಇಲ್ಲಿ ಆಯೋಜಿಸಲಾಗಿತ್ತು. ಆ ಬಳಿಕ ಯಾವುದೇ ದೊಡ್ಡ ಟೂರ್ನಿ ಆಯೋಜನೆಯಾಗಿಲ್ಲ. ಇದೀಗ ಹೊಸದಾಗಿ ಫ್ಲೋರಿಂಗ್‌ ಹಾಕಿರುವುದರಿಂದ ಟೂರ್ನಿಗಳ ಆಯೋಜನೆಗೆ ಅವಕಾಶ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT