ನಾಯಿ ಕಚ್ಚಿದ ಸೇಡಿಗೆ ಹುಡುಕಿ ಹೊಡೆದರು!

7

ನಾಯಿ ಕಚ್ಚಿದ ಸೇಡಿಗೆ ಹುಡುಕಿ ಹೊಡೆದರು!

Published:
Updated:

ಮೈಸೂರು: ನಾಯಿಯೊಂದು ಕಚ್ಚಿತೆಂದು ಸೇಡು ತೀರಿಸಿಕೊಳ್ಳಲು ಇಬ್ಬರು ಆರೋಪಿಗಳು ಹುಡುಕಿಕೊಂಡು ಬಂದು ನಾಯಿಯನ್ನು ಹೊಡೆದಿದ್ದಾರೆ. ಆಸ್ಪತ್ರೆಯಲ್ಲಿ ನಾಯಿ ಸಾವು ಬದುಕಿನ ನಡುವೆ ಹೋರಾಡುತ್ತಿದೆ.‌

ಇಲ್ಲಿನ ಲೋಕನಾಯಕ ನಗರದ ನಂಜಪ್ಪ ಅವರ ಸಾಕು ನಾಯಿಯೇ ಹಲ್ಲೇಗೀಡಾಗಿರುವುದು. ಇವರು ತಮ್ಮ ಮನೆಯ ಮುಂಭಾಗ ನಾಯಿಯನ್ನು ಬಿಟ್ಟಿದ್ದರು. ಈ ವೇಳೆ ಇಬ್ಬರು ವ್ಯಕ್ತಿಗಳು ಭಾನುವಾರ ರಾತ್ರಿ ಬಂದು ಕಬ್ಬಿಣದ ರಾಡಿನಿಂದ ಮನ ಬಂದಂತೆ ಥಳಿಸಿದ್ದಾರೆ.

ಬೆಳಿಗ್ಗೆ ನೋಡಿದಾಗ ಗಾಯಗೊಂಡ ನಾಯಿ ನರಳುತ್ತಿತ್ತು. ತಕ್ಷಣ ಆಸ್ಪತ್ರೆಗೆ ನಂಜಪ್ಪ ಅವರು ದಾಖಲಿಸಿದರು. ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಇಬ್ಬರು ವ್ಯಕ್ತಿಗಳು ನಾಯಿಗೆ ಹೊಡೆಯುತ್ತಿರುವ ದೃಶ್ಯಗಳು ಕಂಡವು. ತಕ್ಷಣ ಹೆಬ್ಬಾಳ ಪೊಲೀಸ್ ಠಾಣೆ ಬಂದ ಅವರು ದೂರು ನೀಡಿದರು.

ದೂರು ಸ್ವೀಕರಿಸಿ ತನಿಖೆ ಕೈಗೊಂಡ ಪೊಲೀಸರು ಇಬ್ಬರು ಯುವಕರನ್ನು ಪತ್ತೆ ಹಚ್ಚಿದರು. ಅವರಲ್ಲಿ ಒಬ್ಬಾತ ನಾಯಿ ಕಚ್ಚಿದ್ದಕ್ಕೆ ಹಲ್ಲೆ ಮಾಡಿರುವುದಾಗಿ ತಿಳಿಸಿದ್ದಾರೆ.

‘ನಾಯಿ ಕಚ್ಚಿದ್ದರಿಂದ ಔಷಧ ತೆಗೆದುಕೊಳ್ಳಬೇಕಾಯಿತು. ಇದಕ್ಕೆ ಸಾಕಷ್ಟು ಹಣ ಖರ್ಚಾಯಿತು. ಹೀಗಾಗಿ, ಹಲ್ಲೆ ಮಾಡಿರುವುದಾಗಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 2

  Frustrated
 • 0

  Angry

Comments:

0 comments

Write the first review for this !