ಎಚ್.ಡಿ.ಕೋಟೆ: ಪಟ್ಟಣದಲ್ಲಿ ಮಂಗಳವಾರ ಐವರು ಬಾಲಕರಿಗೆ ನಾಯಿಯೊಂದು ಕಚ್ಚಿ ತೀವ್ರತರವಾಗಿ ಗಾಯಗೊಳಿಸಿದೆ.

3ನೇ ವಾರ್ಡ್ ನಿವಾಸಿ ಸುನಿಲ್ ಹಾಗೂ ರೋಜಾ ದಂಪತಿಯ ಪುತ್ರ ಯಶವಂತ (2), ಶಿವಾಜಿ ರಸ್ತೆಯಲ್ಲಿ ವಾಸವಾಗಿರುವ ರಿಜ್ವಾನ್, ಅಲ್ತಾಮ್, ರಿಯಾಜ್ ಪಾಷ,ಸಿದ್ದಪ್ಪಾಜಿ ರಸ್ತೆಯ ಒಬ್ಬ ಬಾಲಕ ಗಾಯಗೊಂಡಿ ದ್ದಾರೆ. ಯಶವಂತನ ಮೂಗಿನ ಭಾಗದಲ್ಲಿ ಚರ್ಮ ಕಿತ್ತು ಬಂದಿದೆ. ಬಾಲಕನನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

‘3, 4 ಮತ್ತು 5ನೇ ವಾರ್ಡ್‌ಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯ ನಿವಾಸಿ ಕೆಂಚಯ್ಯ ದೂರಿದರು.

‘ಪಟ್ಟಣದಲ್ಲಿ 50ಕ್ಕೂ ಹೆಚ್ಚು ನಾಯಿಗಳಿಗೆ ಈ ನಾಯಿ ಕಚ್ಚಿದೆ. ಅವುಗಳನ್ನು ಹಿಡಿಯಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪುರಸಭಾ ಮುಖ್ಯಾಧಿಕಾರಿ ಡಿ.ಎನ್.ವಿಜಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.