ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆ ಚುನಾವಣೆಗೆ ಅಧಿಸೂಚನೆ

Last Updated 9 ಮೇ 2019, 20:02 IST
ಅಕ್ಷರ ಗಾತ್ರ

ಕೆ.ಆರ್.ನಗರ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಗುರುವಾರ ಅಧಿಸೂಚನೆ ಹೊರಡಿಸಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.

ಕೆ.ಆರ್‌.ನಗರ ಪುರಸಭೆ ವ್ಯಾಪ್ತಿಯ ವಾರ್ಡ್‌ ಸಂಖ್ಯೆ 23ರಲ್ಲಿ ಸ್ಪರ್ಧೆ ಕೋರಿ ಪಕ್ಷೇತರ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ನಂಜನಗೂಡು ನಗರಸಭೆ ಹಾಗೂ ಬನ್ನೂರು ಪುರಸಭೆ ವ್ಯಾಪ್ತಿಯಲ್ಲಿ ಯಾವುದೇ ಉಮೇದುವಾರಿಕೆ ಸಲ್ಲಿಕೆ ಆಗಿಲ್ಲ.

ಪುರಸಭೆ ಹಾಗೂ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 16 ಕೊನೆಯ ದಿನವಾಗಿದೆ.

‘ನಾಮಪತ್ರ ಪರಿಶೀಲನೆ 17ರಂದು ನಡೆಯಲಿದೆ. ಉಮೇದುವಾರಿಕೆ ಹಿಂದೆ ತೆಗೆದುಕೊಳ್ಳಲು 20 ಕೊನೆಯ ದಿನವಾಗಿದೆ. ಮೇ 29 ರಂದು ಬೆಳಿಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ’ ಎಂದು ಕೆ.ಆರ್‌.ನಗರ ತಹಶೀಲ್ದಾರ್ ಮಂಜುಳಾ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮತಗಳ ಎಣಿಕೆ ಕಾರ್ಯ ಮೇ 31ರಂದು ಬೆಳಿಗ್ಗೆ 8 ಗಂಟೆಯಿಂದ ನಡೆಯಲಿದೆ. ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಅದು 31ರವರೆಗೂ ಮುಂದುವರಿಯಲಿದೆ ಎಂದರು.

ಕೆ.ಆರ್‌.ನಗರ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 23 ವಾರ್ಡ್ ಗಳಿದ್ದು, 1ರಿಂದ 11ರವೆಗೆ ಮಿನಿ ವಿಧಾನಸೌಧ, 12ರಿಂದ 23ವರೆಗೆ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿನ ಕೊಠಡಿ ಸಂಖ್ಯೆ 1ರಲ್ಲಿ ಬೆಳಿಗ್ಗೆ 11ರಿಂದ ಸಂಜೆ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಎರಡನೇ ಶನಿವಾರ ರಜೆ ಇರುವುದಿಲ್ಲ. ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ರವರು, ತಾಲ್ಲೂಕು ಪಂಚಾಯಿತಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು ಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಕೆ.ಆರ್‌.ನಗರ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 31,258 ಮತದಾರರು ಇದ್ದು, 15,405 ಪುರುಷರು, 15,848 ಮಹಿಳೆಯರು, 5 ಇತರರು ಇದ್ದಾರೆ. ವಾರ್ಡ್ ಸಂಖ್ಯೆ 2ರಲ್ಲಿ ಅತಿ ಹೆಚ್ಚು 2,348, ವಾರ್ಡ್ ಸಂಖ್ಯೆ 7ರಲ್ಲಿ ಅತಿ ಕಡಿಮೆ 924 ಮತದಾರರು ಇದ್ದಾರೆ ಎಂದು ಹೇಳಿದರು.

ಚುನಾವಣಾ ವೆಚ್ಚ ₹.1.50 ಲಕ್ಷಕ್ಕೆ ಮಿತಿ ಗೊಳಿಸಲಾಗಿದೆ. ಎಡಗೈ ಉಂಗುರ ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುತ್ತದೆ. ಪುರಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ ಅಭ್ಯರ್ಥಿಗಳ ಭಾವಚಿತ್ರ, ಸಂಖ್ಯೆ, ಚಿಹ್ನೆ, ನೋಟಾ ಇರುತ್ತದೆ, ಆದರೆ, ವಿವಿ ಪ್ಯಾಟ್ ಇರುವುದಿಲ್ಲ.

ಸಾಮಾನ್ಯ ಅಭ್ಯರ್ಥಿಗಳು ₹ 1 ಸಾವಿರ, ಪರಿಶಿಷ್ಟ ಜಾತಿ, ಪಂಗಡ, ಮಹಿಳೆಯರು ₹ 500 ಠೇವಣಿ ಇಡಬೇಕಾಗುತ್ತದೆ. ಮೀಸಲಾತಿ ವಾರ್ಡ್ ಗಳಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದರು.

ವಾರ್ಡ್ ಸಂಖ್ಯೆ-1 (ಹಿಂದುಳಿದ ವರ್ಗ (ಎ) ಮಹಿಳೆ), ವಾರ್ಡ್ ಸಂಖ್ಯೆ-2 (ಸಾಮಾನ್ಯ), ವಾರ್ಡ್ ಸಂಖ್ಯೆ-3 (ಸಾಮಾನ್ಯ), ವಾರ್ಡ್ ಸಂಖ್ಯೆ-4 (ಸಾಮಾನ್ಯ ಮಹಿಳೆ), ವಾರ್ಡ್ ಸಂಖ್ಯೆ-5 (ಪರಿಶಿಷ್ಟ ಜಾತಿ), ವಾರ್ಡ್ ಸಂಖ್ಯೆ-6 (ಸಾಮಾನ್ಯ ಮಹಿಳೆ), ವಾರ್ಡ್ ಸಂಖ್ಯೆ-7 (ಹಿಂದುಳಿದ ವರ್ಗ ಬಿ), ವಾರ್ಡ್ ಸಂಖ್ಯೆ-8 (ಪರಿಶಿಷ್ಟ ಪಂಗಡ), ವಾರ್ಡ್ ಸಂಖ್ಯೆ-9 (ಹಿಂದುಳಿದ ವರ್ಗ ಎ ಮಹಿಳೆ), ವಾರ್ಡ್ ಸಂಖ್ಯೆ-10 (ಹಿಂದುಳಿದ ವರ್ಗ ಎ), ವಾರ್ಡ್ ಸಂಖ್ಯೆ-11 (ಸಾಮಾನ್ಯ), ವಾರ್ಡ್ ಸಂಖ್ಯೆ-12 (ಸಾಮಾನ್ಯ), ವಾರ್ಡ್ ಸಂಖ್ಯೆ-13 (ಪರಿಶಿಷ್ಟ ಜಾತಿ), ವಾರ್ಡ್ ಸಂಖ್ಯೆ-14 (ಹಿಂದುಳಿದ ವರ್ಗ ಎ ಮಹಿಳೆ), ವಾರ್ಡ್ ಸಂಖ್ಯೆ-15 (ಸಾಮಾನ್ಯ ಮಹಿಳೆ), ವಾರ್ಡ್ ಸಂಖ್ಯೆ-16 (ಸಾಮಾನ್ಯ), ವಾರ್ಡ್ ಸಂಖ್ಯೆ-17 (ಸಾಮಾನ್ಯ), ವಾರ್ಡ್ ಸಂಖ್ಯೆ-18 (ಸಾಮಾನ್ಯ ಮಹಿಳೆ), ವಾರ್ಡ್ ಸಂಖ್ಯೆ-19 (ಹಿಂದುಳಿದ ವರ್ಗ ಎ), ವಾರ್ಡ್ ಸಂಖ್ಯೆ-20 (ಸಾಮಾನ್ಯ ಮಹಿಳೆ), ವಾರ್ಡ್ ಸಂಖ್ಯೆ-21 (ಹಿಂದುಳಿದ ವರ್ಗ ಎ), ವಾರ್ಡ್ ಸಂಖ್ಯೆ-22 (ಪರಿಶಿಷ್ಟ ಜಾತಿ ಮಹಿಳೆ), ವಾರ್ಡ್ ಸಂಖ್ಯೆ-23 (ಸಾಮಾನ್ಯ ಮಹಿಳೆ) ಮೀಸಲುಗೊಳಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT