ಮಂಗಳವಾರ, ಡಿಸೆಂಬರ್ 1, 2020
22 °C

ಆನೆ ದಾಳಿ: ವೃದ್ಧ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಎಚ್.ಡಿ.ಕೋಟೆ: ತಾಲ್ಲೂಕಿನ ನೆಟ್ಟಕಲ್ಲಹುಂಡಿ ಗ್ರಾಮದಲ್ಲಿ ಕಾಡಾನೆಯೊಂದು ಗುರುವಾರ ದಾಳಿ ನಡೆಸಿದ್ದು, ಚಿನ್ನಪ್ಪ (61) ಎಂಬುವವರು ಮೃತಪಟ್ಟಿದ್ದಾರೆ.

ಆನಂತರ, ಆನೆಯು ಅವರ ಮನೆ ಮೇಲೂ ದಾಳಿ ನಡೆಸಿದೆ. ದಾಳಿಯಲ್ಲಿ ಚಿನ್ನಪ್ಪ ಅವರ ಪತ್ನಿ ಕೊಟ್ಟೂರಮ್ಮ ಗಾಯಗೊಂಡಿದ್ದು, ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆನೆ ದಾಳಿಯಿಂದ ಎರಡು ಮನೆಗಳು ಹಾಗೂ ಒಂದು ಬೈಕ್‌ ಜಖಂಗೊಂಡಿವೆ.

ಅರಣ್ಯ ಇಲಾಖೆ ವತಿಯಿಂದ ಶಾಸಕ ಅನಿಲ್‌ ಕುಮಾರ್‌ ಸಮ್ಮುಖದಲ್ಲಿ ₹ 2.5 ಲಕ್ಷ ಪರಿಹಾರದ ಚೆಕ್‌ ಅನ್ನು ಮೃತ ವೃದ್ಧನ ಪತ್ನಿ ಕೊಟ್ಟೂರಮ್ಮ ಅವರಿಗೆ ನೀಡಲಾಯಿತು. ಉಳಿದ ₹ 5 ಲಕ್ಷ ಪರಿಹಾರವನ್ನು ಇನ್ನೆರಡು ದಿನಗಳಲ್ಲಿ ಕೊಡಿಸಲಾಗುವುದು ಎಂದು ಅನಿಲ್‌ ಕುಮಾರ್‌ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.