ಮಂಗಳವಾರ, ಮೇ 26, 2020
27 °C
ಮುಖ್ಯಮಂತ್ರಿಗೆ ಮನವಿ ಮಾಡಿದ ಮಾಜಿ ಸಚಿವ, ಬಿಜೆಪಿ ಮುಖಂಡ ಎಚ್‌.ವಿಶ್ವನಾಥ್

ಅಸಮರ್ಥರನ್ನು ವಾಪಸ್ ಕರೆಸಿಕೊಳ್ಳಿ: ವಿಶ್ವನಾಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಮೈಸೂರಿನಲ್ಲಿ ಕೊರೊನಾ ಮಹಾಮಾರಿಯ ನರ್ತನ ಹೆಚ್ಚಳಗೊಂಡಿದೆ. ಕೆಲವು ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧವಿಲ್ಲ ಎನ್ನುವಂತಿದ್ದಾರೆ. ಇಂತಹ ಅಸಮರ್ಥರನ್ನು ವಾಪಸ್‌ ಕರೆಸಿಕೊಂಡು, ಸಮರ್ಥರನ್ನು ನಿಯೋಜಿಸಿ’ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಎಚ್‌.ವಿಶ್ವನಾಥ್‌ ವಿಡಿಯೊ ಕ್ಲಿಪ್ಪಿಂಗ್ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

‘ನಂಜನಗೂಡಿನಲ್ಲಿ ನರಕ ಸದೃಶ್ಯ ವಾತಾವರಣ ನಿರ್ಮಾಣಗೊಳ್ಳುತ್ತಿದೆ. ಕೋವಿಡ್–19 ಮರಣ ಮೃದಂಗ ಬಾರಿಸುವಲ್ಲಿ ಮೈಸೂರು ಮುಂಚೂಣಿಯಲ್ಲಿ ನಿಲ್ಲುವ ಆತಂಕ ಎದುರಾಗಿದೆ. ಇದನ್ನು ತಪ್ಪಿಸಲು ವಿಶೇಷ ತಂಡವೊಂದನ್ನು ರಚಿಸಿ. ಜನರು ಕೊರೊನಾ ಮಹಾಮಾರಿಯಿಂದ ನಲುಗುತ್ತಿರುವುದನ್ನು ತಪ್ಪಿಸಿ’ ಎಂದು ಮುಖ್ಯಮಂತ್ರಿಯಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ.

ವಿಶ್ವನಾಥ್ ಮನವಿಯ ವಿಡಿಯೊ, ಈ ಭಾಗದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು