ಗುರುವಾರ , ಜೂನ್ 30, 2022
28 °C

ಪ್ರಿಯಕರನಿಗಾಗಿ ಹೆತ್ತಮಗುವನ್ನೇ ಅನಾಥ ಎಂದ ಮಹಿಳೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಪ್ರಿಯಕರನಿಗಾಗಿ ಮಹಿಳೆಯೊಬ್ಬಳು ಹೆತ್ತ ಮಗುವನ್ನೇ ‘ಅನಾಥ ಮಗು’ ಎಂದು ಹೇಳಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.

ರಾಯಚೂರಿನ 23 ವರ್ಷದ ವಿವಾಹಿತ ಮಹಿಳೆಗೂ ಇಲ್ಲಿನ ರಘು (23) ಎಂಬಾತನಿಗೂ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದೆ. ನಂತರ, ಇಬ್ಬರೂ ವಿವಾಹವಾಗಲು ನಿರ್ಧರಿಸಿದರು. ಆಕೆಗೆ 9 ತಿಂಗಳು ಮಗು ಇದೆ. ಆದರೆ, ಆ ಮಗುವನ್ನು ಜತೆಯಲ್ಲಿರಿಸಿಕೊಂಡು ಸಂಸಾರ ನಡೆಸುವುದು ಕಷ್ಟ ಎಂದು ರಘು ಹೇಳಿದ್ದಾನೆ. ಹೀಗಾಗಿ, ಮಗುವನ್ನೇ ಬಿಡಲು ಮಹಿಳೆ ನಿರ್ಧರಿಸಿದಳು.

ಆಕೆ ಹಾಗೂ ಮಗುವನ್ನು ರಾಯಚೂರಿನಿಂದ ಮೇ 10ರಂದು ಕರೆದುಕೊಂಡು ನಗರಕ್ಕೆ ಬಂದಿದ್ದಾನೆ. ಮಗುವಿನೊಂದಿಗೆ ಇಲ್ಲಿನ ಲಷ್ಕರ್‌ ಪೊಲೀಸ್‌ ಠಾಣೆಗೆ ತೆರಳಿ, ‘ರಾಯಚೂರಿನ ಬಸ್‌ ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯೊಬ್ಬರು ನನಗೆ ಮಗು ನೀಡಿ ಹೊರಟು ಹೋದರು. ಎಷ್ಟೇ ಹುಡುಕಾಡಿದರೂ ಆಕೆ ಸಿಗಲಿಲ್ಲ. ಅನಿವಾರ್ಯವಾಗಿ ಇಲ್ಲಿಗೆ ತಂದಿದ್ದೇನೆ’ ಎಂದು ಹೇಳಿ ಪೊಲೀಸರಿಗೆ ಆ ಮಗುವನ್ನು ಒಪ್ಪಿಸಿದ್ದಾನೆ.

ಬಳಿಕ ಪೊಲೀಸರು ತನಿಖೆ ಕೈಗೊಂಡು, ರಾಯಚೂರಿನಲ್ಲಿ ಜಾಲಾಡಿದ್ದಾರೆ. ಪತ್ನಿ ಮತ್ತು ಮಗು ಕಾಣೆಯಾಗಿರುವ ಕುರಿತು ಆ ಮಹಿಳೆಯ ಪತಿ ದೂರು ನೀಡಿರುವ ಮಾಹಿತಿ ಲಭಿಸಿದೆ. ಪತಿಯನ್ನು ವಿಚಾರಿಸಿದಾಗ ಮಗು ಅವರದ್ದೇ ಎಂದು ಗೊತ್ತಾಯಿತು. ಬಳಿಕ ಯುವಕ ಹಾಗೂ ಮಹಿಳೆಯನ್ನು ವಿಚಾರಣೆಗೊಳಪಡಿಸಿದಾಗ ಪ್ರಕರಣ ಬಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ, ಮಹಿಳೆ ಹಾಗೂ ಆಕೆಯ ಪ್ರಿಯಕರ ರಘು ವಿರುದ್ಧ ಐಪಿಸಿ ಸೆಕ್ಷನ್ 317 ಹಾಗೂ 120ಬಿ ಅನ್ವಯ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು