ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ನಗರದಲ್ಲಿ ಡಾ.ರಾಜ್‌ಕುಮಾರ್ ಸ್ಮರಣೆ

ಹಲವು ಸಾಧಕರಿಗೆ ಸನ್ಮಾನ, 3 ಕಡೆ ಕಾರ್ಯಕ್ರಮ
Last Updated 24 ಏಪ್ರಿಲ್ 2021, 6:51 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಶುಕ್ರವಾರ ವರನಟ ಡಾ.ರಾಜ್‌ಕುಮಾರ್ ಅವರನ್ನು ಸ್ಮರಿಸಲಾಯಿತು. ಹಲವು ಸಾಧಕರನ್ನು ಸನ್ಮಾನಿಸಿ, ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿರುವ ಡಾ.ರಾಜ್‌ಕುಮಾರ್ ಅವರ ಪುತ್ಥಳಿಗೆ ಡಾ.ರಾಜ್‌ಕುಮಾರ್ ಸೇವಾ ಸಮಿತಿ ವತಿಯಿಂದ ಪುಷ್ಪನಮನ ಸಲ್ಲಿಸಲಾಯಿತು.

ವಿವಿಧ ಕ್ಷೇತ್ರಗಳ ಸಾಧಕರಾದ ಅಂಬಳೆ ಶಿವಣ್ಣ, ಎಂ.ರಾಮೇಗೌಡ, ಆರ್.ಚಕ್ರಪಾಣಿ,
ಮಂಜುನಾಥ್, ಅಮೂಲ್ಯ, ಡಾ.ಬಿ.ಎಚ್.ಮೋಹನ್, ಪರಮೇಶ್ವರಯ್ಯ, ಜಿ.ಶ್ರೀನಾಥ್ ಬಾಬು, ಎಸ್.ಇ.ಗಿರೀಶ್
ಅವರಿಗೆ ಕರುನಾಡ ಕಣ್ಮಣಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಕೌಟಿಲ್ಯ, ‘ಕೊರೊನಾದಂತಹ ಇಂದಿನ ಸಂದರ್ಭದಲ್ಲಿ ಮಾನವೀಯ ಮೌಲ್ಯಗಳ ಅಗತ್ಯ ಇದೆ. ಮಾನವೀಯ ಮೌಲ್ಯಗಳಿಗಾಗಿ ನಾವಿಂದು ರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೋಡಲೇಬೇಕಿದೆ’ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತಕುಮಾರ್‌ಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಲಕ್ಷ್ಮಿದೇವಿ, ಬಿಜೆಪಿ ಮಖಂಡ ಯಶಸ್ವಿನಿ ಸೋಮಶೇಖರ್, ಡಾ.ರಾಜ್ ಸೇವಾ ಸಮಿತಿಯ ಅಧ್ಯಕ್ಷ ಸುಚೀಂದ್ರ, ಕಾರ್ಯದರ್ಶಿ ಲೋಹಿತ್, ಮಧು ಎನ್.ಪೂಜಾರ್, ಹರೀಶ್‍ನಾಯ್ಡು  ಇದ್ದರು.

ಐವರು ಸಾಧಕರಿಗೆ ಪ್ರಶಸ್ತಿ: ಕರ್ನಾಟಕ ಸೇನಾ ಪಡೆ ವತಿಯಿಂದ ಇಲ್ಲಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ನಡೆದ ಡಾ.ರಾಜ್‌ಕುಮಾರ್ ಜನ್ಮದಿನಾಚರಣೆಯಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಐವರಿಗೆ ‘ಡಾ.ರಾಜ್ ಕನ್ನಡ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಭರತ್ ಎಂ.ಗೌಡ, ಮಡ್ಡೀಕೆರೆ ಗೋಪಾಲ್, ಎಸ್.ಇ.ಗಿರೀಶ್, ಡಾ.ಎಸ್.ಎ.ನರಸಿಂಹೇಗೌಡ, ಬಿ.ಎಚ್.ಸತೀಶ್‍ಕುಮಾರ್ ಗೌರವಕ್ಕೆ ಪಾತ್ರಾದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ರಾಜ್ ಅಭಿಮಾನಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ರಾಮೇಗೌಡ, ಡಾ.ರಾಜ್‍ಕುಮಾರ್ ಅವರು ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡ ಕ್ಷಣವನ್ನು ಸ್ಮರಿಸಿದರು.

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಕೌಟಿಲ್ಯ, ಅಖಿಲ ಕರ್ನಾಟಕ ಬ್ರಾಹ್ಮಣ ಒಕ್ಕೂಟದ ವಲಯ ಉಪಾಧ್ಯಕ್ಷ ಡಾ.ಬಿ.ಆರ್.ನಟರಾಜ್‌ ಜೋಯಿಸ್,  ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‍ಗೌಡ, ಬಂಗಾರಪ್ಪ ಇದ್ದರು.

ಮೈಸೂರಿನ ಡಾ.ರಾಜ್‍ಕುಮಾರ್ ಉದ್ಯಾನದಲ್ಲಿರುವ ಡಾ.ರಾಜ್‌ಕುಮಾರ್ ಅವರ ಪ್ರತಿಮೆಯನ್ನು ಪಾಲಿಕೆ ಸಿಬ್ಬಂದಿಯೊಡಗೂಡಿ ಅಭಿಮಾನಿಗಳು ಶುಕ್ರವಾರ ಸ್ವಚ್ಛಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT