ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಟಿಲ್ಯ ವಿದ್ಯಾಲಯಕ್ಕೆ ಪ್ರಥಮ ಬಹುಮಾನ

Last Updated 2 ಅಕ್ಟೋಬರ್ 2020, 0:50 IST
ಅಕ್ಷರ ಗಾತ್ರ

ಮೈಸೂರು: ಮಕ್ಕಳಲ್ಲಿ ಸಾಮಾಜಿಕ ಹೊಣೆಗಾರಿಕೆ ಪ್ರೇರೇಪಿಸಲು ‘ವಿಪ್ರೋ’ ನೀಡುವ ‘ವಿಪ್ರೋ- ಅರ್ಥಿಯನ್ ಕಾರ್ಯಕ್ರಮ’ದಡಿ ಮೈಸೂರಿನ ಕೌಟಿಲ್ಯ ವಿದ್ಯಾಲಯದ ಮಕ್ಕಳು ಕೌಶಲ ಪ್ರದರ್ಶಿಸಿ ಉತ್ತಮ ಸಾಧನೆ ಮಾಡಿ ದ್ದಾರೆ. ರಾಷ್ಟ್ರಮಟ್ಟದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಶಾಲೆಯ ತಂಡವು ಪ್ರಥಮ ಬಹುಮಾನ, ₹ 1 ಲಕ್ಷ ಬಹುಮಾನ ಗಳಿಸಿದೆ.

ಶಾಲೆಯ 24 ಮಕ್ಕಳ ತಂಡವು ‘ನೀರಿನ ಸದ್ಬಳಕೆ’, ‘ಘನತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆ’ ಮತ್ತು ‘ಜೈವಿಕ ತಂತ್ರಜ್ಞಾನ ನಿರ್ವಹಣೆ’ ಕುರಿತು ಸಂಶೋಧನೆ ನಡೆಸಿದ್ದ ವಿದ್ಯಾರ್ಥಿಗಳು ಪ್ರಬಂಧವನ್ನು ವಿಪ್ರೋ ಸಂಸ್ಥೆಗೆ ಸಲ್ಲಿಸಿದ್ದರು.

ತ್ಯಾಜ್ಯ ವಿಲೇವಾರಿ ಕುರಿತ ಪ್ರಬಂಧ ಮೊದಲ ಸ್ಥಾನ ಗಳಿಸಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿತ್ತು. ಅದರ ಭಾಗವಾಗಿ ವಿಪ್ರೋ ಸಂಸ್ಥೆ ಸಂಶೋಧನಾ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿದೆ.

ಕೌಟಿಲ್ಯ ವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಬಹುಮಾನದ ಮೊತ್ತವನ್ನು ಈ ಸಂಶೋಧನೆಯಲ್ಲಿ ತೊಡಗಿಸಿಕೊಂಡ ವಿವಿಧ ತರಗತಿಗಳ ಎಂಟು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಶಿಕ್ಷಣತಜ್ಞ ಡಾ.ಪ್ರಕಾಶ್ ಬಾಬು ಹಾಗೂ ಸಂಸ್ಥೆಯ ಅಧ್ಯಕ್ಷ ಆರ್.ರಘು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಸಂಸ್ಥೆಯ ಪ್ರಾಂಶು ಪಾಲರಾದ ಡಾ.ಎಲ್.ಸವಿತಾ, ಉಪ ಪ್ರಾಂಶುಪಾ ಲರಾದ ಬಿ.ಬಿ.ರಾಧಿಕಾ, ಇಂಗ್ಲಿಷ್ ಶಿಕ್ಷಕ ಇ. ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT