ಶುಕ್ರವಾರ, ಆಗಸ್ಟ್ 6, 2021
23 °C
‌ಸುಸೂತ್ರವಾಗಿ ನಡೆದ ಎಸ್ಸೆಸ್ಸೆಲ್ಸಿ ಪ್ರಥಮಭಾಷೆ ಪರೀಕ್ಷೆ–ಇಂದು ತೃತೀಯ ಭಾಷೆ

ಮೈಸೂರು: ಇನ್ನೊಂದೇ ಪರೀಕ್ಷೆ ಬಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಪರೀಕ್ಷೆ ಕೂಡ ಸುಸೂತ್ರವಾಗಿ ನಡೆದಿದ್ದು, ಕೊನೆಯ ಹಂತಕ್ಕೆ ಬಂದು ತಲುಪಿದೆ. ಇನ್ನೊಂದು ಪರೀಕ್ಷೆ ಬಾಕಿ ಇದೆ.

ಜಿಲ್ಲೆಯ 139 ಪರೀಕ್ಷಾ ಕೇಂದ್ರಗಳಲ್ಲಿ ಸುರಕ್ಷತಾ ಕ್ರಮಗಳೊಂದಿಗೆ ಇದುವರೆಗಿನ ಐದೂ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿವೆ.

ಗುರುವಾರ ನಡೆದ ಪ್ರಥಮ ಭಾಷೆ ಪರೀಕ್ಷೆಯೂ ಸುಲಭವಾಗಿತ್ತು ಎಂಬುದಾಗಿ ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದ್ದಾರೆ. ಪರೀಕ್ಷೆ ಬರೆದ ಮಕ್ಕಳು ಸಂತಸದಿಂದಲೇ ಹೊರಬಂದರು. ಈ ಪರೀಕ್ಷೆ ಬರೆಯಲು ನೋಂದಾಯಿಸಿದ್ದ ಒಟ್ಟು 38,265 ವಿದ್ಯಾರ್ಥಿಗಳಲ್ಲಿ 354 ಮಂದಿ ಗೈರಾಗಿದ್ದರು.

‘ಗುರುವಾರ ಕೂಡ ಜಿಲ್ಲೆಯಲ್ಲಿ ಯಾವುದೇ ಕೇಂದ್ರದಲ್ಲಿ ಅಕ್ರಮ ಚಟುವಟಿಕೆ ವರದಿ ಆಗಿಲ್ಲ. ಎಲ್ಲಾ ಕೇಂದ್ರಗಳಲ್ಲೂ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಕೊನೆಯದಾಗಿ ಶುಕ್ರವಾರ ತೃತೀಯ ಭಾಷಾ ಪರೀಕ್ಷೆ ನಡೆಯಲಿದೆ’ ಎಂದು ಡಿಡಿಪಿಐ ಡಾ.ಪಾಂಡುರಂಗ ತಿಳಿಸಿದ್ದಾರೆ.

ವಸತಿ ನಿಲಯಗಳಿಂದ ಬಂದು 446 ಮಂದಿ ಪರೀಕ್ಷೆ ಬರೆದಿದ್ದಾರೆ. ಮಕ್ಕಳನ್ನು ಕರೆತರಲು ಕೆಎಸ್‌ಆರ್‌ಟಿಸಿಯ 60 ಬಸ್ಸುಗಳನ್ನು ಬಾಡಿಗೆಗೆ ಪಡೆಯಲಾಗಿತ್ತು. 742 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಜಿಲ್ಲೆಯಲ್ಲಿ ಪ್ರಥಮ ಭಾಷೆ ಪರೀಕ್ಷೆ ಬರೆದವರು

* 38,265; ನೋಂದಾಯಿತ ವಿದ್ಯಾರ್ಥಿಗಳು

* 37,911; ಪರೀಕ್ಷೆಗೆ ಹಾಜರಾದವರು

* 354; ಗೈರು

* 339; ಪರೀಕ್ಷೆ ಬರೆದ ಹೊರ ಜಿಲ್ಲೆ ವಿದ್ಯಾರ್ಥಿಗಳ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು