ಬುಧವಾರ, ಏಪ್ರಿಲ್ 21, 2021
25 °C

ಸಂಭ್ರಮಾಚರಣೆ ವೇಳೆ ಅತಿಯಾಗಿ ಮದ್ಯ ಸೇವನೆ; ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮೈಸೂರು: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಅತಿಯಾಗಿ ಮದ್ಯಸೇವಿಸಿದ ಇಲ್ಲಿನ ಮಂಡಿ ಮೊಹಲ್ಲಾದ ನಿವಾಸಿ ಕಾರ್ತೀಕ್ (22) ಎಂಬ ಎಲ್‌ಎಲ್‌ಬಿ ಅಂತಿಮ ವರ್ಷದ ವಿದ್ಯಾರ್ಥಿ ಮೃತಪಟ್ಟಿದ್ದಾರೆ.

ಇವರು ತಮ್ಮ ಸ್ನೇಹಿತರಾದ ಚಂದನ್ ಮತ್ತು ಪರಮೇಶ್‌ ಎಂಬುವವರ ಜತೆ ಆದಿತ್ಯ ವಸತಿಗೃಹದಲ್ಲಿ ಡಿ. 31ರ ರಾತ್ರಿ ಇಡೀ ನಿರಂತರವಾಗಿ ಮದ್ಯ ಸೇವಿಸಿದ್ದಾರೆ. ಬುಧವಾರ ಮಧ್ಯಾಹ್ನ 12.30ರ ಹೊತ್ತಿಗೆ ಮಂಚದಿಂದ ಕೆಳಗೆ ಬಿದ್ದಿರುವ ಸ್ಥಿತಿಯಲ್ಲಿ ಇವರ ಮೃತದೇಹ ದೊರಕಿದೆ ಎಂದು ಸ್ನೇಹಿತರು ತಿಳಿಸಿದ್ದಾರೆ.

ಇವರ ದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು