ತಿ.ನರಸೀಪುರ: ‘ಬಸವಾದಿ ಶರಣರ ಪರಂಪರೆಯಡಿ ಧರ್ಮ ಜಾಗೃತಿ ಮೂಡಿಸುತ್ತಿರುವ ಮಠಗಳು, ಸ್ವಾಮೀಜಿಗಳು ವೈದಿಕ ಧರ್ಮದತ್ತ ವಾಲದೇ ಮಾನವೀಯ ಮೌಲ್ಯಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದರು.

ತಾಲ್ಲೂಕಿನ ಬೊಮ್ಮನಹಳ್ಳಿಯ ಸಿದ್ಧರಹಳ್ಳಿ ಪಾರಮಾರ್ಥ ಗವಿಮಠದ ಆವರಣದಲ್ಲಿ ಶುಕ್ರವಾರ ನಡೆದ ನಿರಂಜನ ನಿರಾಭಾರಿ ಪಟ್ಟಾಧಿಕಾರ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘12ನೇ ಶತಮಾನದಲ್ಲಿ ಅಸ್ತಿತ್ವದಲ್ಲಿದ್ದ ಅನಿಷ್ಟ ಪದ್ಧತಿಗಳು ಹಾಗೂ ವೈದಿಕ ಧರ್ಮದ ವಿರುದ್ಧ ಬಸವಣ್ಣನವರು ಹೋರಾಟ ಮಾಡಿದ್ದರು. ಅನುಭವ ಮಂಟಪದ ಮೂಲಕ ಸಮಾನತೆಗೆ ಶ್ರಮಿಸಿದ್ದರು. ಕಾಯಕವೆಂದರೆ ಉತ್ಪಾದನೆ, ದಾಸೋಹವೆಂದರೆ ವಿತರಣೆ. ಕಾಯಕದ ಮೂಲಕ ಗಳಿಸಿದ್ದನ್ನು ಸಮಾನವಾಗಿ ಹಂಚಿಕೊಳ್ಳಬೇಕು. ಸಮ ಸಮಾಜ ನಿರ್ಮಿಸುವ ಬಸವಾದಿ ಶರಣರ ಕನಸ್ಸನ್ನು ಮಠಗಳ ಸ್ವಾಮೀಜಿಗಳು ನನಸು ಮಾಡಬೇಕು’ ಎಂದರು.

‘ಜಾತಿ ಅಥವಾ ಧರ್ಮವನ್ನು ಕೇಳಿ ನಾವು ಹುಟ್ಟಿಲ್ಲ. ಜನ್ಮದಾತರ ಜಾತಿ ಹೇಳಿ ಬದುಕುತ್ತೇವೆ. ಶರಣ ಪರಂಪರೆ ಬಂದು ಶತಮಾನಗಳೇ ಕಳೆದರೂ ಇನ್ನೂ ಸಾಮಾಜಿಕ ಅಸಮಾನತೆ, ಜಾತೀಯತೆ ಇದೆ. ಇದನ್ನು ಹೋಗಲಾಡಿಸಿ ಸಮಾಜದ ಪರಿವರ್ತನೆಗೆ ಮಠಗಳು ಹಾಗೂ ಸ್ವಾಮೀಜಿಗಳು ಅಗತ್ಯ ಮಾರ್ಗದರ್ಶನ ನೀಡಬೇಕು’ ಎಂದು ಮನವಿ ಮಾಡಿದರು.

ಕನಕಪುರ ಮರಳೇ ಗವಿಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿಗೆ ಷಟ್ಸ್ಥಲ ಬ್ರಹ್ಮೋಪದೇಶ, ಚಿನ್ಮಯಾನುಗ್ರಹ ದೀಕ್ಷೆ ನಡೆಸಿ ಪಟ್ಟಾಧಿಕಾರ ನೆರವೇರಿಸಿದರು.

ಹರಿಹರ ವೀರಶೈವ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಷಡಕ್ಷರಿ ಸ್ವಾಮೀಜಿ ಭಾವಚಿತ್ರವನ್ನು ಕಾಂಗ್ರೆಸ್ ಮುಖಂಡ ಎಚ್.ಸಿ.ಮಹದೇವಪ್ಪ ಹಾಗೂ ಬಾಲ ಷಡಕ್ಷರಿ ಶ್ರೀಗಳ ಭಾವಚಿತ್ರವನ್ನುಶಾಸಕ ಎಂ.ಅಶ್ವಿನ್ ಕುಮಾರ್ ಅನಾವರಣಗೊಳಿಸಿದರು.

ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನಕಪುರ ಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ, ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಮೈಸೂರು ಹೊಸಮಠ ಚಿದಾನಂದ ಸ್ವಾಮೀಜಿ, ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶಿರಸಿ ಬಣ್ಣದ ಮಠದ ಶಿವಲಿಂಗ ಸ್ವಾಮೀಜಿ, ಮುಡುಕುತೊರೆ ತೋಪಿನ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಕುಂದೂರು ದೊಡ್ಡಮಠದ ಇಮ್ಮಡಿ ಬಸವರಾಜೇಂದ್ರ ಸ್ವಾಮೀಜಿ, ಗುರುವಿನಪುರದ ಜಗದೀಶ್ವರ ಶಿವಾಚಾರ್ಯ ಸ್ವಾಮೀಜಿ, ಶಿರಸಿ ಸುದಾಪುರ ಜೈನಮಠದ ಭಟ್ಟಾಕಳಂಕ ಭಟ್ಟಾರಕ ಸ್ವಾಮೀಜಿ, ಚಿತ್ರದುರ್ಗ ಮಾದಾರ ಚನ್ನಯ್ಯ, ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಶಿವಮೂರ್ತಿ ಕಾನ್ಯ, ಸುನೀಲ್ ಬೋಸ್, ಸಿ.ಓಂಪ್ರಕಾಶ್, ಚಿದರವಳ್ಳಿ ಗ್ರಾ.ಪಂ ಅಧ್ಯಕ್ಷ ಚಿಕ್ಕಮಲ್ಲಪ್ಪ ಇದ್ದರು.

‘ರಾಜಕಾರಣದಿಂದ ಧರ್ಮ ಪ್ರದಕ್ಷಿಣೆ’
‘ಇಂದು ರಾಜಕಾರಣ ಧರ್ಮ ಪ್ರದಕ್ಷಿಣೆ ಮಾಡುತ್ತಿದೆ. ಮಠಾಧಿಪತಿಗಳು ಪಕ್ಷ, ಜಾತಿ ಮೀರಿ ಸಮಾಜವನ್ನು ನೋಡುವ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಬೇಕು’ ಎಂದು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣ ಸಲಹೆ ನೀಡಿದರು.

‘ಎಲ್ಲರನ್ನೂ ಒಂದೇ ಭಾವನೆಯಿಂದ ಕಂಡು, ಒಪ್ಪಿಕೊಳ್ಳುವುದೇ ಬಸವಪ್ರಜ್ಞೆ. ಧಾರ್ಮಿಕ ಕೇಂದ್ರಗಳಾದ ಮಠಗಳಿಗೆ ಬಸವತತ್ವ ಬೋಧಿಸುವ ಉದ್ದೇಶವಿರಬೇಕು’ ಎಂದು ಹೇಳಿದರು.

‘ಸಿದ್ಧರಹಳ್ಳಿ ಪಾರಮಾರ್ಥ ಗವಿಮಠದ ಅಭಿವೃದ್ಧಿಗೆ ₹ 10 ಲಕ್ಷ ದೇಣಿಗೆ ನೀಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.