ಶುಕ್ರವಾರ, ಜೂನ್ 5, 2020
27 °C

ಹಾಲು ವಿತರಣೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಜಿಲ್ಲೆಯ ವ್ಯಾಪ್ತಿಯಲ್ಲಿರುವ ನಗರ/ಪಟ್ಟಣಗಳಲ್ಲಿನ ಕಟ್ಟಡ ಕಾರ್ಮಿಕರು, ನಿರಾಶ್ರಿತರು, ಬಡ ಕೂಲಿ ಕಾರ್ಮಿಕರಿಗೆ ಉಚಿತವಾಗಿ ಹಾಲು ವಿತರಿಸುವ ಕಾರ್ಯಕ್ರಮಕ್ಕೆ ಮೈಮುಲ್ ಶುಕ್ರವಾರ ಚಾಲನೆ ನೀಡಿತು.

ಮೈಸೂರಿನ ಡಾ.ರಾಜ್‌ಕುಮಾರ್ ರಸ್ತೆಯಲ್ಲಿನ ಹುಡ್ಕೋ ಕಾಲೊನಿಯಲ್ಲಿ ಸಾಂಕೇತಿಕವಾಗಿ ಹಾಲು ವಿತರಿಸಿತು. ಜಿಲ್ಲೆಯ ಎಲ್ಲೆಡೆ ಹಾಲು ವಿತರಣೆ ನಡೆಯಿತು.

ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಲಾಕ್‌ಡೌನ್ ಜಾರಿಯಲ್ಲಿದ್ದು, ಬಡವರು, ಕೂಲಿ ಕಾರ್ಮಿಕರು ದುಡಿಯಲು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹವರ ನೆರವಿಗೆ ಬರಲು ಸರ್ಕಾರ ಮುಂದಾಗಿ ಈ ಯೋಜನೆ ರೂಪಿಸಿದೆ ಎಂದು ಮೈಮುಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಿ.ಅಶೋಕ್ ಮಾಹಿತಿ ನೀಡಿದರು.

‘ಮಹಾನಗರ ಪಾಲಿಕೆ, ಸ್ಲಂ ಬೋರ್ಡ್‌, ಲೇಬರ್ ಕಮಿಷನರ್, ಡಿಯುಡಿಸಿ ಸೆಲ್ ಮೈಸೂರಿನಲ್ಲಿ ಎಷ್ಟು ಹಾಲು ಬೇಕು ಎಂಬ ಬೇಡಿಕೆ ಪಟ್ಟಿ ನೀಡುತ್ತವೆ. ಇದರಂತೆ ಉಳಿದೆಡೆ ನಗರಸಭೆ/ಪುರಸಭೆ ಸಿಬ್ಬಂದಿ ಪಟ್ಟಿ ಕೊಡುತ್ತಾರೆ. ಪ್ರಸ್ತುತ 30 ಸಾವಿರ ಲೀಟರ್ ಹಾಲಿಗೆ ಬೇಡಿಕೆಯಿದೆ. ಇಷ್ಟನ್ನು ನಾವು ಕೊಡುತ್ತಿದ್ದೇವೆ. ಸರ್ಕಾರ ನಮಗೆ ಒಂದು ಲೀಟರ್‌ಗೆ ₹ 36 ಕೊಡಲಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು