ಶುಕ್ರವಾರ, ಜೂಲೈ 10, 2020
22 °C

ಮೈಸೂರು | ಕುರಿಗಾಹಿಯನ್ನು ಬಲಿ ಪಡೆದಿದ್ದ ಹುಲಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಹುಣಸೂರು ತಾಲ್ಲೂಕಿನ ನಾಗರಹೊಳೆ ಹುಲಿ ರಕ್ಷಿತಾರಣ್ಯದ ಹಂದಿಹಳ್ಳದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ 8 ವರ್ಷದ ಗಂಡು ಹುಲಿ ಬುಧವಾರ ಸೆರೆಯಾಗಿದೆ.

ಮಂಗಳವಾರವಷ್ಟೇ ಇಲ್ಲಿನ ನೇರಳಕುಪ್ಪೆ ಬಿ ಹಾಡಿಯ ಕುರಿಗಾಹಿ ಜಗದೀಶ್ ಎಂಬುವವರ ರುಂಡ ಮತ್ತು ಕೈಗಳು ಇಲ್ಲಿ ಪತ್ತೆಯಾಗಿದ್ದವು. ಹುಲಿಯು ದೇಹದ ಉಳಿದೆಲ್ಲ ಭಾಗಗಳನ್ನೂ ತಿಂದು ಹಾಕಿತ್ತು‌.

ಇವರ ದೇಹದ ಅವಯವಗಳು ಪತ್ತೆಯಾದ ಸ್ಥಳದಲ್ಲೇ ಮಾಂಸವನ್ನಿರಿಸಿ ಬೋನನ್ನು ಇಡಲಾಗಿತ್ತು. ಬುಧವಾರ ನಸುಕಿನಲ್ಲಿ ಹುಲಿ ಬೋನಿನಲ್ಲಿ ಸೆರೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಹಲವು ತಿಂಗಳುಗಳಿಂದ ಹುಲಿಯು ಹಲವು ಜಾನುವಾರುಗಳನ್ನು ತಿಂದು ಹಾಕಿ, ಆತಂಕ ಮೂಡಿಸಿತ್ತು. ಹುಲಿಯನ್ನು ಕೂರ್ಗಳ್ಳಿಯ ಚಾಮುಂಡಿ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು