ಗುರುವಾರ , ನವೆಂಬರ್ 26, 2020
20 °C

ಮೈಸೂರು ದಸರಾ| ತಾಲೀಮಿನ ವೇಳೆ ಕುದುರೆ ಮೇಲಿಂದ ಜಾರಿ ಬಿದ್ದ ಪೊಲೀಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ದಸರಾ ಮಹೋತ್ಸವದ ಜಂಬೂಸವಾರಿಗಾಗಿ ಗುರುವಾರ ಇಲ್ಲಿ ನಡೆದ ತಾಲೀಮಿನ ವೇಳೆ, ಅಶ್ವಾರೋಹಿ ಪಡೆಯ ಪೊಲೀಸರೊಬ್ಬರು ಕುದುರೆಯಿಂದ ಜಾರಿ ಬಿದ್ದಿದ್ದು, ಯಾವುದೇ ಅಪಾಯವಾಗಿಲ್ಲ.

ಅರಮನೆ ಆವರಣದಲ್ಲಿ ತಾಲೀಮು ನಡೆಯುವಾಗ ಆನೆಗಳನ್ನು ಕಂಡು ಹಾಗೂ ವಾದ್ಯದ ಸದ್ದಿಗೆ ಕೆಲ ಕುದುರೆಗಳು ಬೆದರಿವೆ. ಅದರಲ್ಲಿ ಒಂದು ಕುದುರೆ ಗಾಬರಿಗೊಂಡು, ಜಿಗಿದು ಓಡಲಾರಂಭಿಸಿತು. ಸವಾರಿ ಮಾಡುತ್ತಿದ್ದ ಪೊಲೀಸ್‌, ಆಗ ನಿಯಂತ್ರಣ ಕಳೆದುಕೊಂಡರು.

‘ಗಾಬರಿಗೆ ಒಳಗಾದ ಕುದುರೆಯು ಇದೇ ಮೊದಲ ಬಾರಿ ಪಾಲ್ಗೊಂಡಿದೆ. ದಿನದ ಮೊದಲ ಅಭ್ಯಾಸದ ವೇಳೆಗೇ ಈ ಘಟನೆ ನಡೆಯಿತು. ಬಳಿಕ ನಡೆದ ಎರಡನೇ ಸುತ್ತಿನ ತಾಲೀಮಿನಲ್ಲಿ ಯಾವುದೇ ಸಮಸ್ಯೆ ಉಂಟಾಗಲಿಲ್ಲ’ ಎಂದು ಕೆಎಆರ್‌ಪಿ ಮೌಂಟೆಂಡ್‌ ಕಮಾಂಡೆಂಟ್‌ ಎಂ.ಜಿ.ನಾಗರಾಜು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು