ಶನಿವಾರ, ಜುಲೈ 24, 2021
25 °C

ಮೈಸೂರು | ನರಸಿಂಹರಾಜ ಕ್ಷೇತ್ರ: ಸಮುದಾಯಕ್ಕೆ ಕೋವಿಡ್‌ –ಸಚಿವ ಸೋಮಶೇಖರ್‌ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಸಿಂಹರಾಜ ಕ್ಷೇತ್ರದಲ್ಲಿ ಸಮುದಾಯಕ್ಕೆ ಕೋವಿಡ್‌: ಸಚಿವ ಸೋಮಶೇಖರ್‌ ಆತಂಕ

ಮೈಸೂರು: ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಸಮುದಾಯಕ್ಕೆ ಕೊರೊನಾ ಸೋಂಕು ಹರಡುವುದು ಹೆಚ್ಚಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಆತಂಕ ವ್ಯಕ್ತಪಡಿಸಿದ್ದಾರೆ.

‌ಇದೇ ಕ್ಷೇತ್ರದಲ್ಲಿ ಸಾವಿನ ಪ್ರಕರಣಗಳೂ ಹೆಚ್ಚುತ್ತಿವೆ. ಆದರೆ, ಈ ಭಾಗದ ಜನರು ಸಮೀಕ್ಷೆ ನಡೆಸಲೂ ಅವಕಾಶ ನೀಡುತ್ತಿಲ್ಲ. ರ‍್ಯಾಂಡಮ್‌ ಪರೀಕ್ಷೆ ಮಾಡಲೂ ಬಿಡುತ್ತಿಲ್ಲ ಎಂದರು.

ಹೀಗಾಗಿ, ಸ್ಥಳೀಯ ನಾಯಕರು, ಶಾಸಕರು, ಧಾರ್ಮಿಕ ಮುಖಂಡರ ಸಭೆ ನಡೆಸಿ ನರಸಿಂಹರಾಜ ಕ್ಷೇತ್ರವನ್ನು ಸಂಪೂರ್ಣ ಲಾಕ್‌ಡೌನ್‌ ಮಾಡುವ ಬಗ್ಗೆ 2–3 ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಪ್ರದೇಶದ 200 ಮೀಟರ್‌ ಅಂತರದಲ್ಲಿ ಕೋವಿಡ್‌–19ನಿಂದ ನಾಲ್ಕು ಮಂದಿ ಮೃತಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು