ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಬ್ಬಿತಿಟ್ಟು: ಕಾಡಾನೆಗಳಿಗಾಗಿ ಮುಂದುವರಿದ ಕಾರ್ಯಾಚರಣೆ

ಅರಬ್ಬಿತಿಟ್ಟು ವನ್ಯಜೀವಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಡುಕಾಟ, ಪತ್ತೆಯಾಗದ ಆನೆಗಳು
Last Updated 11 ನವೆಂಬರ್ 2019, 9:34 IST
ಅಕ್ಷರ ಗಾತ್ರ

ಹುಣಸೂರು: ತಾಲ್ಲೂಕಿನ ಅರಬ್ಬಿತಿಟ್ಟು ವನ್ಯಜೀವಿ ಸಂರಕ್ಷಿತ ಅರಣ್ಯದಂಚಿನಲ್ಲಿ ಉಪಟಳ ನೀಡುತ್ತಿದ್ದ ಕಾಡಾನೆಗಳ ಹಿಂಡನ್ನು ಪತ್ತೆ ಮಾಡಲು ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರವೂ ಕಾರ್ಯಾಚರಣೆ ನಡೆಸಿದರು.

ಅರಬ್ಬಿತಿಟ್ಟು ಅರಣ್ಯಪ್ರದೇಶದ 150 ಎಕರೆ ಪ್ರದೇಶದಲ್ಲಿ ಸಾಕಾನೆ ಅಭಿಮನ್ಯು ಮತ್ತು ಕೃಷ್ಣ ಆನೆ ಸೇರಿದಂತೆ ಇಲಾಖೆಯ 50 ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಕಾಡಾನೆಗಳು ಪತ್ತೆಯಾಗಲಿಲ್ಲ.

3 ಕಾಡಾನೆಗಳ ಹಿಂಡು ಶುಕ್ರವಾರ ರಾತ್ರಿ ದಾಳಿ ನಡೆಸಿ ರೈತರ ಫಸಲು ನಾಶಪಡಿಸಿತ್ತು. ಆನೆಗಳನ್ನು ಕಾಡಿಗಟ್ಟಲು ಶನಿವಾರ ಕಾರ್ಯಾಚರಣೆ ನಡೆಸಲಾಗಿತ್ತು. 250 ಎಕರೆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಭಾನುವಾರವೂ ಕಾರ್ಯಾಚರಣೆಯನ್ನು ಮುಂದುವರೆಸಲಾಯಿತು. ಅರಣ್ಯ ಸುತ್ತಲಿನ ಸಾರ್ವಜನಿಕರ ಗದ್ದಲಕ್ಕೆ ಹೆದರಿ ಚನ್ನಮ್ಮ ದೇವರ ಅರಣ್ಯ ಪ್ರದೇಶಕ್ಕೆ ಹಿಂದಿರುಗಿರುವ ಸಾಧ್ಯತೆ ಇದೆ ಎಂದು ವಲಯ ಅರಣ್ಯಾಧಿಕಾರಿ ಸುರೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT