ಶುಕ್ರವಾರ, ಜನವರಿ 27, 2023
26 °C

ನಂಜನಗೂಡು: ಶ್ರೀಕಂಠೇಶ್ವರ ಜಾತ್ರೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂಜನಗೂಡು

ನಂಜನಗೂಡು: ಇದೇ 26ರಂದು ನಡೆಯಬೇಕಿದ್ದ ಶ್ರೀಕಂಠೇಶ್ವರ ಸ್ವಾಮಿಯ ಪಂಚ ಮಹಾರಥೋತ್ಸವವನ್ನು (ದೊಡ್ಡ ಜಾತ್ರೆ) ರದ್ದುಪಡಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ರಥೋತ್ಸವ ರದ್ದುಪಡಿಸಲಾಗಿದೆ. ಪೂರ್ವ ನಿಗದಿಯಂತೆ ಮಾರ್ಚ್ 19ರಿಂದ 30ರವರೆಗೆ ದೇವಾಲಯದಲ್ಲಿ ನಡೆಯುವ ಸಂಪ್ರದಾಯ ಬದ್ಧ ಧಾರ್ಮಿಕ ವಿಧಿ ವಿಧಾನಗಳನ್ನು ಸ್ಥಳೀಯರ ಸಹಯೋಗದೊಂದಿಗೆ ದೇವಾಲಯದ ಒಳಗೇ ನಡೆಸಬಹುದು. ಮಾರ್ಚ್‌ 26ರಂದು ಸಾಂಕೇತಿಕವಾಗಿ ಚಿಕ್ಕ ತೇರಿನಲ್ಲಿ ಉತ್ಸವ ನಡೆಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು