ಮಂಗಳವಾರ, ಮಾರ್ಚ್ 21, 2023
20 °C
5 ಮಂದಿ ಬಂಧನ

ವಾಹನವಿಲ್ಲದೇ ಕೋಟ್ಯಂತರ ಸಾಲ!: 7 ಲಾರಿಗೆ ₹1.35 ಕೋಟಿ ಪಡೆದು ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ವಾಹನ ಇಲ್ಲದೆಯೇ ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಸಾಲ ಪಡೆದಿರುವ ಬೃಹತ್ ಜಾಲವನ್ನು ಬಯಲಿಗೆಳೆದಿರುವ ನಗರದ ದೇವರಾಜ ಠಾಣೆಯ ಪೊಲೀಸರು 15 ಮಂದಿಯನ್ನು ಬಂಧಿಸಿದ್ದಾರೆ.

ಆರೋಪಿಗಳು ವಿವಿಧ ಹಣಕಾಸು ಸಂಸ್ಥೆಗಳಿಂದ ಬರೋಬರಿ ₹ 1.35 ಕೋಟಿ ಸಾಲ ಪ‍ಡೆದಿದ್ದಾರೆ. ಅದಕ್ಕಾಗಿ ಬಳಕೆ ಮಾಡಿದ 7 ಲಾರಿ, 2 ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಪೈಕಿ ಬಹುತೇಕರು ತಮಿಳುನಾಡಿಗೆ ಸೇರಿದವರು.

’ಸಾಲದ ಕಂತು ಪಾವತಿಸದವರ ಲಾರಿಯನ್ನು ವಶಕ್ಕೆ ಪಡೆಯಲು ಹೋದಾಗ ಅಲ್ಲಿ ವಾಹನವೇ ಇರಲಿಲ್ಲ’ ಎಂದು  ಚೋಳಮಂಡಲಂ ಫೈನಾನ್ಸ್ ಸ್ಥಳೀಯ ವ್ಯವಸ್ಥಾಪಕ ವಿಜಯ್‍ ದೂರು ನೀಡಿದ್ದರು.

ಏನಿದು ಪ್ರಕರಣ?
ಆಂಧ್ರಪ್ರದೇಶದ ವಿವಿಧ ಆರ್‌ಟಿಒ ಕಚೇರಿಗಳಲ್ಲಿ ನೋಂದಣಿಯಾಗಿರುವಂತೆ ನಕಲಿ ಆರ್‌.ಸಿ ಶೀಟ್‌ನ್ನು ಸೃಷ್ಟಿಸಿರುವ ಆರೋಪಿಗಳು ಕರ್ನಾಟಕದ ಹಲವು ಆರ್‌ಟಿಒ ಕಚೇರಿಗಳಲ್ಲಿ ವರ್ಗಾವಣೆ, ಮರು ನೋಂದಣಿಗಾಗಿ ಅರ್ಜಿ ಸಲ್ಲಿಸಿ ಸ್ಥಳೀಯ ವಿಳಾಸದ ನಕಲಿ ದಾಖಲೆಗಳನ್ನು ನೀಡಿ, ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು.

’2019ರಿಂದ ಇಲ್ಲಿಯವರೆಗೆ ಒಟ್ಟು 200 ನಕಲಿ ಆರ್.ಸಿ ಕಾರ್ಡ್‌ ಸೃಷ್ಟಿಸಿದ್ದಾರೆ. ಈ ದಾಖಲೆಗಳ ಆಧಾರದಲ್ಲೇ ಹಣಕಾಸು ಸಂಸ್ಥೆಗಳಿಂದ ವಾಹನ ಸಾಲ ಪಡೆದು ವಂಚಿಸುತ್ತಿದ್ದರು. ಆಂಧ್ರಪ್ರದೇಶದಲ್ಲಿ ಇನ್ನೂ ವಾಹನಗಳ ನೋಂದಣಿ ಪ್ರಕ್ರಿಯೆ ಡಿಜಿಟಲೀಕರಣಗೊಂಡಿಲ್ಲ. ಹಾಗಾಗಿ, ಆರೋಪಿಗಳು ಮೂಲ ನಕಲಿ ನೋಂದಣಿಯನ್ನು ಆಂಧ್ರದಲ್ಲೆ ಮಾಡಿಸುತ್ತಿದ್ದರು ಎಂಬ ಅಂಶ ತನಿಖೆ ವೇಳೆ ಗೊತ್ತಾಗಿದೆ’ ಎಂದು ಅಧಿಕೃತ ಮೂಲಗಳು ತಿಳಿಸಿವೆ. ದೇವರಾಜ ಎಸಿಪಿ ಎಂ.ಎನ್.ಶಶಿಧರ್ ತನಿಖೆಯ ನೇತೃತ್ವ ವಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು