ಮಂಗಳವಾರ, ಏಪ್ರಿಲ್ 7, 2020
19 °C
ನಾಗರಹೊಳೆಯ ದಮ್ಮನಕಟ್ಟೆ ಕೇಂದ್ರವನ್ನು ಕಾಕನಕೋಟೆ ಸಫಾರಿ ಕೇಂದ್ರ ಎಂದು ಮರುನಾಮಕರಣ

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ: ಸಫಾರಿಗೆ ಆನ್‌ಲೈನ್‌ ಬುಕ್ಕಿಂಗ್ ಆರಂಭ

ಸತೀಶ್ ಬಿ.ಆರಾಧ್ಯ Updated:

ಅಕ್ಷರ ಗಾತ್ರ : | |

Prajavani

ಎಚ್.ಡಿ.ಕೋಟೆ: ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂತರಸಂತೆ ಮತ್ತು ಡಿ.ಬಿ.ಕುಪ್ಪೆ ವನ್ಯಜೀವಿ ವ್ಯಾಪ್ತಿಯಲ್ಲಿ ಸಫಾರಿ ನಡೆಸಲು ಆನ್‌ಲೈನ್‌ನಲ್ಲಿ ಕಾಯ್ದಿರಿಸುವ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ. ಸದ್ಯ, ಒಂದು ಬಸ್‌ಗೆ 25 ಟಿಕೆಟ್‌ ಕಾಯ್ದಿರಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.

ದಮ್ಮನಕಟ್ಟೆ ಸಫಾರಿ ಕೇಂದ್ರವನ್ನು ಕಾಕನಕೋಟೆ ಸಫಾರಿ ಕೇಂದ್ರ ಎಂದು ಮರುನಾಮಕರಣ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ಕಾಯ್ದಿರಿಸುವುದರಿಂದ ಟಿಕೆಟ್ ಕೌಂಟರ್‌ನಲ್ಲಿ ಸಾಲುಗಟ್ಟಿ ನಿಲ್ಲುವ ಕಿರಿಕಿರಿ ತಪ್ಪಲಿದೆ.

ಸೋಮವಾರದಿಂದ ಶುಕ್ರವಾರದವರಗೆ ಬೆಳಿಗ್ಗೆ 6ರಿಂದ 9 ಗಂಟೆಯವರಗೆ, ಸಂಜೆ 3.30ರಿಂದ 6ಗಂಟೆಯವರಗೆ ಸಫಾರಿ ಇರಲಿದೆ. ಒಂದು ಸಫಾರಿಗೆ ₹ 500 ಕ್ಯಾಮೆರಾಗೆ ₹ 500, 5 ವರ್ಷ ಮೇಲ್ಪಟ್ಟ 12 ವರ್ಷದೊಳಗೆ ಮಕ್ಕಳಿಗೆ ₹ 250, ವಿದೇಶಿಗರಿಗೆ ₹ 1,750 ಟಿಕೆಟ್ ದರ ಇದೆ.

ಶನಿವಾರ, ಭಾನುವಾರ ಮತ್ತು ರಜಾ ದಿನಗಳಲ್ಲಿ ಬೆಳಿಗ್ಗೆ 6ರಿಂದ 7.30, 7.45ರಿಂದ 9, ಸಂಜೆ 3ರಿಂದ 4.30, 4.30ರಿಂದ ಸಂಜೆ 6 ಗಂಟೆಯವರೆಗೆ ಸಫಾರಿ ಇರಲಿದೆ. ಒಂದು ಸಫಾರಿಗೆ ₹ 350, 5 ವರ್ಷ ಮೇಲ್ಪಟ್ಟ 12 ವರ್ಷದೊಳಗಿನ ಮಕ್ಕಳಿಗೆ ₹ 175, ವಿದೇಶಿಗರಿಗೆ ₹ 1,600 ಇರಲಿದೆ. ಕ್ಯಾಮೆರಾಗೆ ₹ 500 ಶುಲ್ಕ ಇದೆ.

ವನ್ಯಜೀವಿಗಳನ್ನು ವೀಕ್ಷಿಸಲು ದೇಶ, ವಿದೇಶದ ಮೂಲೆ ಮೂಲೆಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಹುಲಿ ಮತ್ತು ಕಪ್ಪು ಚಿರತೆ ಚಿತ್ರಗಳನ್ನು ತೆಗೆಯಲು ವಾರಗಟ್ಟಲೆ ರೆಸಾರ್ಟ್‌ಗಳಲ್ಲಿ ಉಳಿದುಕೊಳ್ಳುತ್ತಾರೆ. ಇಲ್ಲಿನ ಸಫಾರಿಯ ಜನರಿಗೆ ಆನೆಗಳು, ನವಿಲು, ಚಿರತೆ, ಹುಲಿ, ಕಾಡೆಮ್ಮೆ, ಕೆನ್ನಾಯಿ, ಕರಡಿಗಳು, ಜಿಂಕೆಗಳು, ಕಡವೆಗಳು ಸೇರಿದಂತೆ ವಿಶೇಷವಾದ ಪಕ್ಷಿಗಳೂ ನೋಡಲು ಸಿಗುತ್ತವೆ. ದಮ್ಮನಕಟ್ಟೆ ಸಫಾರಿಯೆಂದರೆ ಪ್ರವಾಸಿಗರಿಗೆ ಹೆಚ್ಚು ಪ್ರಿಯ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು