ಮೈಸೂರು: ಹಿರಿಯ ನಾಗರಿಕರಿಗೆ ಘನತೆಯ ಬದುಕು ಸಾಗಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಪಿಂಚಣಿದಾರರ, ನಿವೃತ್ತಿದಾರರ ಸಮನ್ವಯ ಸಮಿತಿ ವತಿಯಿಂದ ಗುರುವಾರ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿದ ಸಮಿತಿಯ ಸದಸ್ಯರು, ಸರ್ಕಾರಗಳು ಹಿರಿಯ ನಾಗರಿಕರ ಬದುಕಿನ ಬಗ್ಗೆ ತಾತ್ಸಾರದ ಧೋರಣೆ ಬದಲಾಯಿಸಿಲ್ಲ. ವೃದ್ಧರು ದೇಶಕ್ಕೆ ಆರ್ಥಿಕ ಹೊರೆ ಎಂದು ಪರಿಗಣಿಸುವ ನಿಲುವು ಬದಲಾಗಬೇಕು ಎಂದು ಆಗ್ರಹಿಸಿದರು.

ಭಾರತದಲ್ಲಿ ಪಿಂಚಣಿ ನಿಧಿಯ ಖಾಸಗೀಕರಣದ ಪ್ರಯತ್ನ ನಡೆಯುತ್ತಿದೆ. ವಿದೇಶಿ ಪಿಂಚಣಿ ನಿಧಿ ನಿರ್ವಹಣಾ ಸಂಸ್ಥೆಗಳಿಗೆ ಅವಕಾಶ ನೀಡುವ ಕುರಿತು ಚರ್ಚೆ ನಡೆಯುತ್ತಿದೆ. ಈ ಪ್ರಯತ್ನವನ್ನು ವಿರೋಧಿಸುವುದಾಗಿ ಪ್ರತಿಭಟನಕಾರರು ತಿಳಿಸಿದರು.

ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್), ಇಪಿಎಸ್–95ರ ನಕಾರಾತ್ಮಕ ಅಂಶಗಳ ಕುರಿತು ಈ ದೇಶದ ಕಾರ್ಮಿಕ ವರ್ಗ ಹಲವು ಹೋರಾಟಗಳನ್ನು ಮಾಡಿದರೂ ಸರ್ಕಾರ ಗಮನ ಹರಿಸದೇ ಇರುವುದು ಖಂಡನೀಯ ಎಂದರು.

ವಿಶ್ವ ಕಾರ್ಮಿಕ ಸಂಘಟನೆಗಳ ಒಕ್ಕೂಟಕ್ಕೆ (ಡಬ್ಲ್ಯುಎಫ್‌ಟಿಯು) ಸಂಯೋಜಿತವಾಗಿರುವ ಪಿಂಚಣಿದಾರರ, ನಿವೃತ್ತರ ಅಂತರ ರಾಷ್ಟ್ರೀಯ ಕಾರ್ಮಿಕ ಸಂಘಟನೆ ಅ.1 ರಂದು ವಿಶ್ವದಾದ್ಯಂತ ಪ್ರತಿಭಟನೆಗೆ ಕರೆನೀಡಿತ್ತು. ಇದರ ಅಂಗವಾಗಿ ಮೈಸೂರಿನಲ್ಲೂ ಪ್ರತಿಭಟನೆ ನಡೆಯಿತು.

ಸಂಘದ ಸಂಚಾಲಕ ಲ.ಜಗನ್ನಾಥ ಹಾಗೂ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.