ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಟೊ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

Last Updated 7 ಆಗಸ್ಟ್ 2022, 11:16 IST
ಅಕ್ಷರ ಗಾತ್ರ

ಮೈಸೂರು: ವರ ಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಕರ್ನಾಟಕ ವಿಪ್ರ ವೇದಿಕೆಯಿಂದ ಆಯೋಜಿಸಿದ್ದ ‘ಮನೆ ಮನೆ ವರ ಮಹಾಲಕ್ಷ್ಮಿ ಫೋಟೊ ಸ್ಪರ್ಧೆ’ಯಲ್ಲಿ ವಿಜೇತರಾದವರಿಗೆ ಭಾನುವಾರ ಬಹುಮಾನ ವಿತರಿಸಲಾಯಿತು.

ವಾಟ್ಸ್‌ಆ್ಯಪ್‌ ಮೂಲಕ 250 ಸ್ಪರ್ಧಿಗಳು ಭಾಗವಹಿಸಿದ್ದರು. ಅವುಗಳಲ್ಲಿ ಮಹಾಲಕ್ಷ್ಮಿಯನ್ನು ಆಕರ್ಷಕವಾಗಿ ಅಲಂಕರಿಸಿ ಪೂಜಿಸಿದ ಐವರಿಗೆ ಪ್ರಶಸ್ತಿಪತ್ರ ನೀಡಿ ಸನ್ಮಾನಿಸಲಾಯಿತು.

ನಿವೇದಿತಾ ನಗರದ ನಿವಾಸಿ ಜೆ.ಎಸ್.ಮಂಜುಳಾ ರಾಜ್ (ಪ್ರಥಮ), ಗೋಕುಲಂ ನಿವಾಸಿ ಮಂಜರಿ ಎಂ.ವಿ. (ದ್ವಿತೀಯ), ಅಗ್ರಹಾರದ ರಾಮಾನುಜ ರಸ್ತೆಯ ನಿವಾಸಿ ಶ್ರೀವಾಣಿ ಡಿ.ವಿ. (ತೃತೀಯ), ಸುಬ್ಬರಾಯನಕೆರೆ ಸಮೀಪದ ಕೊತ್ವಾಲ್ ರಾಮಯ್ಯ ರಸ್ತೆ ನಿವಾಸಿ ರಮ್ಯಾ ಸಂದೀಪ್ (ನಾಲ್ಕನೇ) ಮತ್ತು ಕುವೆಂಪು ನಗರದ ನಿವಾಸಿ ಎನ್.ಲೀಲಾವತಿ (ಐದನೇ) ಬಹುಮಾನಗಳನ್ನು ಪಡೆದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಸಾಪ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ‘ವರ ಮಹಾಲಕ್ಷ್ಮಿ ಹಬ್ಬದಂತಹ ಧಾರ್ಮಿಕ ಆಚರಣೆಗಳು ಕುಟುಂಬದಲ್ಲಿ ಶಾಂತಿ–ನೆಮ್ಮದಿ ನೆಲೆಸುವುದಕ್ಕೆ ಹಾಗೂ ಮನೆಯವರೆಲ್ಲರೂ ಸೇರುವುದಕ್ಕೆ ನೆರವಾಗುತ್ತವೆ. ಮಕ್ಕಳಲ್ಲಿ ಸಂಸ್ಕಾರ ಬೆಳೆಸಲು ಸಹಕಾರಿಯಾಗಿವೆ ಮತ್ತು ಮನಸ್ಸಿಗೆ ಸಾಂತ್ವನ ನೀಡುವಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ’ ಎಂದರು.

‘ತಪ್ಪು ಮಾಡುವವರನ್ನು ಸಂಯಮ, ತಾಳ್ಮೆ ಮತ್ತು ಪ್ರೀತಿಯಿಂದ ಸರಿದಾರಿಗೆ ತರುವಲ್ಲಿ ಸ್ತ್ರೀಯರು ಮಹತ್ವದ ಪಾತ್ರ ವಹಿಸುತ್ತಾರೆ’ ಎಂದು ಕಾಂಗ್ರೆಸ್ ಮುಖಂಡ ಎನ್.ಎಂ.ನವೀನ್ ಕುಮಾರ್ ಹೇಳಿದರು.

ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ.ಗಂಗಾಧರ್, ಕರ್ನಾಟಕ ವಿಪ್ರ ವೇದಿಕೆಯ ಅಧ್ಯಕ್ಷ ಅನಿಲ್ ಕುಮಾರ್, ಕನ್ಯಕಾಪರಮೇಶ್ವರಿ ಸಹಕಾರ ಬ್ಯಾಂಕ್ ಅಧ್ಯಕ್ಷ ಎಚ್.ಎಂ.ಸಂದೀಪ್, ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಮುಖಂಡರಾದ ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ಸ್ವಾತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT