ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಕೀಯ ಕಾರಣದಿಂದ ಕಾಶ್ಮೀರ ಸಮಸ್ಯೆ: ಚಕ್ರವತ್ರಿ ಸೂಲಿಬೆಲೆ

Last Updated 5 ಆಗಸ್ಟ್ 2022, 16:15 IST
ಅಕ್ಷರ ಗಾತ್ರ

ಮೈಸೂರು: ‘ನರೇಂದ್ರ ಮೋದಿ ಅಧಿಕಾರಕ್ಕೆ ‌ಬಂದ ನಂತರ ಕಾಶ್ಮೀರದಲ್ಲಿದ್ದ ‘ಆರ್ಟಿಕಲ್–370’ಯಂತಹ ವಿಶೇಷ ಸ್ಥಾನಮಾನವನ್ನು ಕಿತ್ತು‌ ಬಿಸಾಡಿದರು. ಈ ಪರಿಣಾಮ, ಅಲ್ಲಿನ ಬಹುತೇಕರಿಗೆ ಭಾರತದೊಂದಿಗೆ ನಾವು ಒಂದಾಗಿದ್ದೇವೆ ಎಂಬ ಭಾವನೆ ಬಂದಿದೆ. ಅವರನ್ನು ಮತ್ತಷ್ಟು ಬೆಸೆಯುವ ಕೆಲಸ ನಡೆಯಬೇಕಾಗಿದೆ’ ಎಂದು ವಾಗ್ಮಿ ಚಕ್ರವತ್ರಿ ಸೂಲಿಬೆಲೆ ಹೇಳಿದರು.

ಧಾತ್ರಿ‌ ಪ್ರಕಾಶನದಿಂದ ನಗರದ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಎಸ್.ಉಮೇಶ್ ವಿರಚಿತ ‘ಕಾಶ್ಮೀರ್ ಡೈರಿ’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಕಾಶ್ಮೀರದ ಪ್ರತಿ‌ ಗುಡ್ಡಗಳೂ‌ ನಮ್ಮ ಸೈನಿಕರ ಶೌರ್ಯವನ್ನು ಸಾರುತ್ತಿವೆ. ನಮ್ಮವರ ನೆತ್ತರಿನಿಂದ ತೊಯ್ದಿರುವ ಜಾಗವದು. ಆದ್ದರಿಂದ ಪ್ರಾಣ ಕೊಟ್ಟರೂ ಕಾಶ್ಮೀರವನ್ನು ಬಿಡುವುದಿಲ್ಲ’ ಎಂದರು.

‘ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ, ಕಾಶ್ಮೀರ ನಮ್ಮ ಕೈತಪ್ಪಿ‌ ಹೋಗುತ್ತಿದೆ ಎಂಬ ಮಾಹಿತಿಯು ಹಲವು ಬಾರಿ‌ ಬಂದಿದ್ದರೂ ಕ್ರಮ ಕೈಗೊಳ್ಳಲಿಲ್ಲ’ ಎಂದು ಆರೋಪಿಸಿದರು.

‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನದವರು ಮಕ್ಕಳು, ತರುಣರಿಗೆ ತರಬೇತಿ ನೀಡಿ ಗನ್ ಕೊಟ್ಟು‌ ಭಾರತಕ್ಕೆ ಕಳುಹಿಸಲಾಗುತ್ತಿದೆ. ನಾವು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಎಂದು ಹೇಳಿದರೆ, ನಮ್ಮದೇ ಜೆಎನ್‌ಯುನಲ್ಲಿನ ಕೆಲವರು, ಭಾರತ ಆಕ್ರಮಿತ ಪಾಕಿಸ್ತಾನ ಎಂದು ಹೇಳಿಕೊಡುತ್ತಿದ್ದಾರೆ. ರಾಜಕೀಯ ಕಾರಣಗಳಿಂದಾಗಿ ಕಾಶ್ಮೀರದ ಸಮಸ್ಯೆ ಆರಂಭವಾಯಿತು’ ಎಂದು ಆರೋಪಿಸಿದರು.

ಕ್ಯಾಪ್ಟನ್ ನವೀನ್ ನಾಗಪ್ಪ ಕಾರ್ಗಿಲ್ ಯುದ್ಧದ ಅನುಭವ ಹಂಚಿಕೊಂಡರು. ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ನಟರಾಜ್‌ ಕೃತಿಯನ್ನು ಪರಿಚಯಿಸಿದರು. ಲೆಫ್ಟಿನೆಂಟ್ ಜನರಲ್ ಪಿ.ಸಿ.ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ರವೀಂದ್ರ ರೇಷ್ಮೆ ಹಾಗೂ ಲೇಖಕ ಎಸ್.ಉಮೇಶ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT