ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾಹಿತನೇ ಬೇಕು ಎಂದು ಹಠ ಹಿಡಿದ ಯುವತಿ!

Last Updated 25 ಅಕ್ಟೋಬರ್ 2018, 10:23 IST
ಅಕ್ಷರ ಗಾತ್ರ

ಮೈಸೂರು: ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಸಹೋದ್ಯೋಗಿಯನ್ನೇ ಯುವತಿಯೊಬ್ಬಳು ವರಸಿದ ವಿಚಿತ್ರ ಸಂಗತಿ ನಗರದಲ್ಲಿ ನಡೆದಿದೆ.

ಯುವತಿಗೆ 18 ವರ್ಷ ತುಂಬಲು ಕೆಲವೇ ತಿಂಗಳುಗಳಷ್ಟೇ ಬಾಕಿ ಉಳಿದಿತ್ತು. ಆಕೆ ಕಚೇರಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಸಹೋದ್ಯೋಗಿ ಯುವಕನಿಗೆ ಮೊದಲೇ ಮದುವೆಯಾಗಿ 2 ಮಕ್ಕಳಿದ್ದರೂ ಆತನೊಂದಿಗೆ ಪ್ರೇಮಾಂಕುರವಾಗಿದೆ. ಇಬ್ಬರೂ ಒಟ್ಟಿಗೆ ಜೀವಿಸಲು ಆರಂಭಿಸಿದ್ದಾರೆ.

ಇದನ್ನು ತಿಳಿದು ಕೋಪಗೊಂಡ ಯುವತಿಯ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಯುವತಿಗೆ 18 ವರ್ಷ ತುಂಬದ ಕಾರಣ ಅನಿವಾರ್ಯವಾಗಿ ಪೊಲೀಸರು ಯುವಕನ ವಿರುದ್ಧ ಪೊಸ್ಕೊ ಕಾಯಿದೆಯಡಿ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT