ಮೈಸೂರು: ಸೆಸ್ಕ್‌ನ 66/11 ಕೆ.ವಿ. ಎಫ್.ಟಿ.ಎಸ್ ವಿದ್ಯುತ್ ವಿತರಣಾ ಕೇಂದ್ರಗಳಿಂದ ಹೊರಹೊಮ್ಮುವ 11 ಕೆ.ವಿ. ‘ಬಿ’ ಸರ್ಕ್ಯೂಟ್ ಫೀಡರ್‌ನಲ್ಲಿ ಅ.14ರ ಬುಧವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿದೆ.

ಇದರಿಂದ ಗರಡಿಕೇರಿ, ಕುಂಬಾರಕೇರಿ, ಕೆ.ಟಿ.ಸ್ಟ್ರೀಟ್, ಬಾರ್‌ಲೈನ್ ರೆಸ್ಟೋರೆಂಟ್, ಇರ್ವಿನ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಆರ್.ಕೆ.ನಗರದ ಸೆಸ್ಕ್‌ನ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಶಾರದಾದೇವಿ ವಿದ್ಯುತ್ ಮಾರ್ಗದಲ್ಲಿ ಅ.15ರ ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಎಲ್ ಅಂಡ್ ಟಿ ಕಂಪನಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿದೆ.

ಇದರಿಂದ ಶಾರದಾದೇವಿ ನಗರ, ಚಾಮುಂಡೇಶ್ವರಿ ದೇವಸ್ಥಾನ ರಸ್ತೆ, ಕಾವೇರಿ ಅಪಾರ್ಟ್‍ಮೆಂಟ್, ವಾಸು ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ವಿ.ವಿ.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಸ್ಕ್‌ನ 66/11 ಕೆ.ವಿ. ಸೌತ್ ವಿದ್ಯುತ್ ವಿತರಣಾ ಕೇಂದ್ರಗಳಿಂದ ಹೊರಹೊಮ್ಮುವ 11 ಕೆ.ವಿ. ಆರ್‌ಟಿಓ ಫೀಡರ್‌ನಲ್ಲಿ ಅ.15ರ ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಇದರಿಂದ ಬಲ್ಲಾಳ ವೃತ್ತ, ಚಾಮುಂಡಿಪುರಂ, ಆರ್.ಟಿ.ಓ. ಆಫೀಸ್, ಚಾಮರಾಜಮೊಹಲ್ಲಾ, ಜೈನ್ ಭವನ್, ಬೆಸ್ತರಕೇರಿ, ಡಾ.ವಿಷ್ಣುವರ್ಧನ್ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಎನ್.ಆರ್.ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.