ಶನಿವಾರ, ಅಕ್ಟೋಬರ್ 24, 2020
23 °C
‘ಪ್ರಜಾವಾಣಿ’ ಆನ್‌ಲೈನ್ ದಸರಾ ಸಂಗೀತೋತ್ಸವ

‘ಪ್ರಜಾವಾಣಿ’ ಆನ್‌ಲೈನ್ ದಸರಾ ಸಂಗೀತೋತ್ಸವ: ರಾಜೀವ್‌ ತಾರಾನಾಥ್‌ಗೆ ಗೌರವ ಸಮರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಪ್ರಜಾವಾಣಿ’ ಆಯೋಜಿಸಿರುವ 10 ದಿನದ ‘ಪ್ರಜಾವಾಣಿ ಆನ್‌ಲೈನ್ ದಸರಾ ಸಂಗೀತೋತ್ಸವ’ಕ್ಕೆ ಅ.17ರ ಶನಿವಾರ ಸಂಜೆ 6 ಗಂಟೆಗೆ ಸರೋದ್‌ ವಾದಕ ಪಂಡಿತ್ ರಾಜೀವ್ ತಾರಾನಾಥ್ ಚಾಲನೆ ನೀಡಲಿದ್ದಾರೆ.

ಸಂಗೀತೋತ್ಸವ ಉದ್ಘಾಟನೆ ಬಳಿಕ 88ನೇ ಜನ್ಮದಿನ ಆಚರಿಸಿಕೊಳ್ಳಲಿರುವ ಪದ್ಮಶ್ರೀ ಪುರಸ್ಕೃತರೂ ಆಗಿರುವ ಪಂಡಿತ್ ರಾಜೀವ್ ತಾರಾನಾಥ್ ಅವರಿಗೆ ‘ಪ್ರಜಾವಾಣಿ’ ವಿಶೇಷ ಗೌರವ ನೀಡಲಿದೆ.

ಉದ್ಘಾಟನಾ ಸಮಾರಂಭದ ಬಳಿಕ ಸಂಜೆ 6.45ಕ್ಕೆ ಯುಗಳ ಪಿಟೀಲು ವಾದನದ ಮೂಲಕ ಎಲ್ಲೆಡೆ ಖ್ಯಾತರಾಗಿರುವ ಡಾ.ಮೈಸೂರು ಮಂಜುನಾಥ್ ತಮ್ಮ ಪುತ್ರ ವಿದ್ವಾನ್‌ ಸುಮಂತ್‌ ಮಂಜುನಾಥ್‌ ಅವರೊಂದಿಗೆ ಸಂಗೀತ ಕಛೇರಿ ನಡೆಸಿಕೊಡಲಿದ್ದಾರೆ.

ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಸಂಘಟನೆಯಲ್ಲಿ ಕನ್ನಡದ ಹೆಮ್ಮೆಯ, ಪ್ರಸಿದ್ಧ ಕಲಾವಿದರ ಸಹಯೋಗದಲ್ಲಿ ಹತ್ತು ದಿನವೂ ನಿತ್ಯ ಸಂಜೆ 6ರಿಂದ ‘ಪ್ರಜಾವಾಣಿ’ಯ ಫೇಸ್‌ಬುಕ್ ಪುಟದಲ್ಲಿ ಸಂಗೀತೋತ್ಸವದ ಕಾರ್ಯಕ್ರಮ ಪ್ರಸಾರವಾಗಲಿದೆ.

ವೀಕ್ಷಣೆಗಾಗಿ fb.com/prajavani.net ಸಂಪರ್ಕಿಸಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು