ಶುಕ್ರವಾರ, ಅಕ್ಟೋಬರ್ 18, 2019
20 °C

ದಸರಾ ಹಾಫ್‌ ಮ್ಯಾರಥಾನ್‌: ಪ್ರವೀಶ್, ಕಿರಣ್‌ ಸಹದೇವ್‌ಗೆ ಅಗ್ರಸ್ಥಾನ

Published:
Updated:

ಮೈಸೂರು: ಅಮೋಘ ಸಾಮರ್ಥ್ಯ ತೋರಿದ ಪ್ರವೀಶ್‌ ಮತ್ತು ಕಿರಣ್‌ ಸಹದೇವ್‌ ಅವರು ಭಾನುವಾರ ನಡೆದ ದಸರಾ ಹಾಫ್‌ ಮ್ಯಾರಥಾನ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಅಗ್ರಸ್ಥಾನ ಪಡೆದುಕೊಂಡರು.

ಚಾಮುಂಡಿ ವಿಹಾರ ಕ್ರೀಡಾಂಗಣದಿಂದ ಆರಂಭವಾದ 21.1 ಕಿ.ಮೀ. ದೂರದ ಸ್ಪರ್ಧೆಯಲ್ಲಿ ಪ್ರವೀಶ್‌ 1 ಗಂಟೆ 8 ನಿ. 41 ಸೆ.ಗಳಲ್ಲಿ ಪೂರೈಸಿದರು. ಮಹಿಳೆಯರ ವಿಭಾಗದಲ್ಲಿ ಕಿರಣ್ ಸಹದೇವ್‌ 1 ಗಂಟೆ 18 ನಿ.12 ಸೆ.ಗಳಲ್ಲಿ ಗುರಿ ತಲುಪಿದರು.

ಫಲಿತಾಂಶದ ವಿವರ: ಹಾಫ್‌ ಮ್ಯಾರಥಾನ್‌ (21.1 ಕಿ.ಮೀ) ಪುರುಷರ ವಿಭಾಗ: ಪ್ರವೀಶ್ (ಕಾಲ: 1 ಗಂ. 8.41 ಸೆ.)–1, ಚಂದ್ರಶೇಖರ್ (ಕಾಲ: 1 ಗಂ. 8.50 ನಿ.)–2, ಮಿಕಿಸಿಯಾ (ಕಾಲ: 1 ಗಂ. 11.50 ಸೆ.)–3, ಶಿವಾನಂದ ದೊಡ್ಡಮನಿ–4, ಅನಿಲ್‌ ಕುಮಾರ್–5, ನರಸಿಂಹ ಪಟೇಲ್‌–6

ಮಹಿಳೆಯರ ವಿಭಾಗ: ಕಿರಣ್‌ ಸಹದೇವ್‌ (ಕಾಲ: 1 ಗಂ. 18.12 ನಿ.) –1, ಪ್ರೀನು ಯಾದವ್ (ಕಾಲ: 1 ಗಂ. 20.26 ನಿ)–2, ಕೆ.ಎಂ.ಅರ್ಚನಾ (ಕಾಲ: 1 ಗಂ. 20.37 ಸೆ.)–3, ರಿತು ಪೌಲ್‌–4, ಕೆ.ಜೆ.ಸಂಧ್ಯಾ–5, ಕೆ.ಎಸ್‌.ಶಾಲಿನಿ–6

10 ಕಿ.ಮೀ. ಓಟ: ಪುರುಷರ ವಿಭಾಗ: ಸಿದ್ದಪ್ಪ ಮಾಯಪ್ಪ ಗುಂಡಗಿ (ಕಾಲ: 28 ನಿ. 32.15 ಸೆ.)–1, ಕೆ.ಕೆ.ವೆಂಟಕೇಶ್–2, ಟಿಎಸ್‌.ಸಂದೀಪ್‌–3, ಎಸ್‌.ರಾಹುಲ್‌ ಕುಮಾರ್–4, ಸುನಿಲ್‌–5, ಬೆಳ್ಳ ನಾಯಕ–6

ಮಹಿಳೆಯರ ವಿಭಾಗ: ತಿಪ್ಪವ್ವ ಸಣ್ಣಕ್ಕಿ (ಕಾಲ: 35 ನಿ. 28.10 ಸೆ.)–1, ಸಿ.ಎಂ.ರಶ್ಮಿ–2, ಲಕ್ಷ್ಮಿ ಕುಮಾರಿ–3, ಕುಮಾರಿ ಮಮತಾ–4, ಟಿ.ಪಿ.ಆಶಾ–5, ಎಂ.ಮಾಲಾಶ್ರೀ–6

5 ಕಿ.ಮೀ.ಓಟ: ಬಾಲಕರ ವಿಭಾಗ: ಶಿವಾಜಿ ಮಾದಪ್ಪ ಗೌಡರ್‌ (ಕಾಲ: 19 ನಿ. 45.40 ಸೆ.)–1, ಚಂದನ್‌ ಕುಮಾರ್‌–2, ಭೀಮ ಶಂಕರ್‌–3, ಕೆ.ಪಿ.ನಿಶಾಂತ್–4, ಎಚ್‌.ಎಸ್‌.ರಾಮು–5, ರಾಜೇಶ್‌ ಕುಮಾರ್‌–6

ಬಾಲಕಿಯರ ವಿಭಾಗ: ಎಂ.ಮಾದಲಾಂಬಿಕಾ–1, ಎಸ್.ಕೀರ್ತನಾ–2, ನಿಸರ್ಗ–3, ಭಾನುಪ್ರಿಯಾ–4, ಜಿ.ಕುಸುಮಾ–5, ಯಶ್ವರ್ಯಾ–6

Post Comments (+)