ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಪ್ರಕರಣಕ್ಕೆ ಖಂಡನೆ: ನಾಯಕ ಸಮಾಜದಿಂದ ಪ್ರತಿಭಟನೆ 

Last Updated 9 ಅಕ್ಟೋಬರ್ 2020, 6:24 IST
ಅಕ್ಷರ ಗಾತ್ರ

ತಿ.ನರಸೀಪುರ : ಉತ್ತರಪ್ರದೇಶದ ಹಾಥರಸ್ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಖಂಡಿಸಿ ತಾಲ್ಲೂಕು ನಾಯಕರ ಸಂಘದ ಮುಖಂಡರು ಪಟ್ಟಣದ ಮಿನಿ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.

ಜಿ.ಪಂ. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಚ್.ಮಂಜುನಾಥ್ ಮಾತನಾಡಿ, ‘ಉತ್ತರ ಪ್ರದೇಶದಲ್ಲಿ ನಡೆದಿದ್ದು ಅಮಾನವೀಯ ಘಟನೆಯಾಗಿದ್ದು, ಕಾಮುಕರು ಯುವತಿ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆಸಿ ಹತ್ಯೆ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ’ ಎಂದರು.

‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರದಲ್ಲಿ ಪರಿಶಿಷ್ಟರು, ಹಿಂದುಳಿದ ಸಮುದಾಯಕ್ಕೆ ರಕ್ಷಣೆ ಇಲ್ಲವಾಗಿದೆ. ಸಾವಿಗೆ ಕಾರಣರಾದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಸಾವಿಗೆ ನ್ಯಾಯ ದೊರಕಿಸುವಂತೆ’ ಅವರು ಒತ್ತಾಯಿಸಿದರು.

ತಾಲ್ಲೂಕು ನಾಯಕ ಸಂಘದ ಹಂಗಾಮಿ ಅಧ್ಯಕ್ಷ ವೆಂಕಟರಾಮಯ್ಯ, ಉಪಾಧ್ಯಕ್ಷ ಆಲಗೂಡು ನಾಗರಾಜು, ಮಾಜಿ ಅಧ್ಯಕ್ಷ ಚಿನ್ನಸ್ವಾಮಿ, ಪ್ರಧಾನ ಕಾರ್ಯದರ್ಶಿ ಪಿ.ಶಶಿಧರ್, ವಾಲ್ಮೀಕಿ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಡಾ.ಎಂ.ಮಹದೇವಯ್ಯ, ಗೋವಿಂದರಾಜು, ಕೆಬ್ಬೆ ನಾಗಣ್ಣ, ಎಸ್.ಎಂ.ಮಹದೇವಯ್ಯ ಇಂಡವಾಳು ಬಸವರಾಜು, ಆರ್.ಪಿ.ಹುಂಡಿ ನಾಗರಾಜು, ಸುಂದರ್, ಮಹದೇವು, ಯಡದೊರೆ ಸುಬ್ಬಣ್ಣ, ಹೆಮ್ಮಿಗೆ ಹೊನ್ನಯ್ಯ, ಶಿವಸ್ವಾಮಿ, ಮರಿಸ್ವಾಮಿ, ಬನ್ನೂರು ಚಿಕ್ಕಣ್ಣ, ಸುರೇಶ್, ಸಿದ್ದಯ್ಯ, ತಿರುಮಕೂಡಲು ಕುಮಾರ್, ಕೃಷ್ಣಪ್ಪ, ಹೇಮಂತ್, ಇಂದ್ರೇಶ್, ಎಂ.ದಯಾನಂದ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT