ಮಂಗಳವಾರ, ಸೆಪ್ಟೆಂಬರ್ 21, 2021
21 °C

ಪಿಎಸ್‌ಐ ದೈಹಿಕ ಸಾಮರ್ಥ್ಯ ಪರೀಕ್ಷೆ: 431 ಆಕಾಂಕ್ಷಿಗಳು ಹಾಜರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇಲ್ಲಿನ ಸಿಎಆರ್‌ ಮೈದಾನದಲ್ಲಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಹುದ್ದೆಗೆ ನಡೆಯುತ್ತಿರುವ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಶುಕ್ರವಾರ 431 ಆಕಾಂಕ್ಷಿಗಳು ಹಾಜರಾದರು.

ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಖಾಲಿ ಇರುವ ಪಿಎಸ್‌ಐ ಹುದ್ದೆಗಳ ಭರ್ತಿಗಾಗಿ ಎರಡು ಬಾರಿ ಅಧಿಸೂಚನೆ ಹೊರಡಿಸಲಾಗಿತ್ತು. 545 ಹಾಗೂ 402 ಪಿಎಸ್‌ಐ ಹುದ್ದೆಗಳ ಭರ್ತಿಗಾಗಿ ಈಗ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುತ್ತಿದೆ. ಜು.28ರಿಂದ ಪರೀಕ್ಷೆ ನಡೆಯುತ್ತಿದ್ದು, ಆ.2ರವರೆಗೆ ನಡೆಯಲಿದೆ.

‘ಪ್ರತಿ ಕೇಂದ್ರದಲ್ಲಿ 500 ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಈ ಪೈಕಿ ಜು.28ರಂದು 399, 29ರಂದು 389 ಅಭ್ಯರ್ಥಿಗಳು ಹಾಜರಾಗಿದ್ದರು. ಇದೇ ಮೈದಾನದಲ್ಲಿ ಆ.3ರಿಂದ 9ರವರೆಗೆ ದಕ್ಷಿಣ ವಲಯದ ಐಜಿ ನೇತೃತ್ವದಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಕಚೇರಿಯ ಆಡಳಿತಾಧಿಕಾರಿ ಉಮಾಮಹೇಶ್ವರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಓಟ, ಹೈಜಂಪ್‌, ಲಾಂಗ್‌ ಜಂಪ್‌, ಎತ್ತರ, ಎದೆ ಅಳತೆ ಸೇರಿದಂತೆ ವಿವಿಧ ಸಾಮರ್ಥ್ಯ ಪರೀಕ್ಷೆ ನಡೆಸಲಾಯಿತು. ಇದರಲ್ಲಿ ಉತ್ತೀರ್ಣರಾದವರು ಲಿಖಿತ ಪರೀಕ್ಷೆಗೆ ಅರ್ಹತೆ ಪಡೆಯಲಿದ್ದಾರೆ.

‘ನನ್ನ ಮಗ ಅಫೀಜ್‌ವುಲ್ಲಾ ಹಾಸನದಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿದ್ದಾನೆ. ಈಗ ಪಿಎಸ್‌ಐ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಬಂದಿದ್ದಾನೆ. ಓಟ, ಲಾಂಗ್‌ಜಂಪ್‌, ಹೈಜಂಪ್‌ನಲ್ಲಿ ಪಾಸಾಗಿದ್ದಾನೆ. ಉಳಿದ ಸಾಮರ್ಥ್ಯ ಪರೀಕ್ಷೆಗಳಲ್ಲೂ ಪಾಸಾಗುತ್ತಾನೆ ಎಂಬ ವಿಶ್ವಾಸವಿದೆ. ಇದನ್ನು ನೋಡಲು ನಾನು, ಪತ್ನಿ, ಮಗ, ಮಗಳು, ಅಳಿಯ ಎಲ್ಲರೂ ಬಂದಿದ್ದೇವೆ’ ಎಂದು ಜೆ.ಪಿ.ನಗರದ ಬಾಬಾ ಜಾನ್‌ ಸಂತಸ ಹಂಚಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು