ಗುರುವಾರ , ಅಕ್ಟೋಬರ್ 22, 2020
22 °C

ಮೈಸೂರು: ನಗರದಲ್ಲಿ ರಾಮ್‌ರಾಜ್‌ ಮಳಿಗೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದ ಸರಸ್ವತಿಪುರಂನ ಕಾಂತರಾಜ ಅರಸ್ ಮುಖ್ಯ ರಸ್ತೆ, ಚಾಮರಾಜ ಮೊಹಲ್ಲಾದಲ್ಲಿ ರಾಮ್‌ ರಾಜ್ ಕಾಟನ್ ಕಂಪನಿಯ ನೂತನ ಮಳಿಗೆಯನ್ನು ತೆರೆಯಲಾಗಿದೆ. ‌ 

ಮಳಿಗೆಯನ್ನು ಪಾಲಿಕೆ ಸದಸ್ಯ ಎಂ.ಶಿವಕುಮಾರ್ ಗುರುವಾರ ಉದ್ಘಾಟಿಸಿದರು.

ದಕ್ಷಿಣ ಭಾರತದಲ್ಲಿ ರಾಮ್‌ರಾಜ್‌ ಕಾಟನ್‌ ಕಂಪನಿಯು ಷರ್ಟ್‌, ಪಂಚೆ, ಬನಿಯನ್‌ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಗ್ರಾಹಕರ ವಿಶ್ವಾಸಾರ್ಹತೆ ಗಳಿಸಿದೆ. ಆಕರ್ಷ ಣೀಯ ಬಿಳಿ ಉಡುಪುಗಳ ಜೊತೆಗೆ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕರ್ನಾಟಕದ ಹಲವೆಡೆ ಮಳಿಗೆ ತೆರೆದಿದೆ. ಅಲ್ಲದೇ, www.ram rajcotton.in ಮೂಲಕ ಆನ್‌ ಲೈನ್‌ನಲ್ಲೂ ಮಾರಾಟ ಮಾಡುತ್ತಿದೆ. ಶ್ರೀಲಂಕಾ, ಸಿಂಗಪುರ, ಮಲೇಷ್ಯಾ ಸೇರಿದಂತೆ ಹಲವು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ವೈರಾಣು ಸೋಂಕು ಹರಡದಂತೆ ನೋಡಿಕೊಂಡು, ರಕ್ಷಣೆ ನೀಡು ವಂಥ ಪಂಚೆಗಳನ್ನು ತಯಾ ರಿಸಲಾಗಿದೆ ಎಂದು ಕಂಪೆನಿ ಪ್ರಕಟಣೆ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು