ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಬೆಂಬಲ ಬೆಲೆ ಖಾತರಿಗೆ ಆಗ್ರಹ, ಪ್ರತಾಪಸಿಂಹ  ಕಚೇರಿ ಎದುರು ಪ್ರತಿಭಟನೆ

Last Updated 12 ಏಪ್ರಿಲ್ 2022, 7:52 IST
ಅಕ್ಷರ ಗಾತ್ರ

ಮೈಸೂರು: ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಖಾತರಿಗೊಳಿಸಲು ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕ ಯೋಗೇಂದ್ರ ಯಾದವ್ ನೇತೃತ್ವದಲ್ಲಿ ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸಂಸದ ಪ್ರತಾ‍ಪಸಿಂಹ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ-ಸಂಯುಕ್ತ ಹೋರಾಟ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಯೋಗೇಂದ್ರ ಯಾದವ್, ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ತೋರಿಸಿ ಎಂದು ಆಗ್ರಹಿಸಿದರು.

'ಪ್ರಧಾನಿ ಮೋದಿ ಅವರು ಸೀತೆಯ ಪತಿ ರಾಮನ ಹೆಸರು ಹೇಳಿಕೊಂಡು ನೀತಾಳ ಪತಿ ಅಂಬಾನಿಗೆ ಕೆಲಸ ಮಾಡುಕೊಡುತ್ತಿದ್ದಾರೆ' ಎಂದು ಟೀಕಿಸಿದರು.

ಭತ್ತ ಹಾಗೂ ರಾಗಿಯ ರಾಶಿಯನ್ನು ಸಂಸದರ ಕಚೇರಿ ಮುಂದೆ ರಾಶಿ ಹಾಕಲಾಗಿತ್ತು.

ಸಂಸದ ಪ್ರತಾಪಸಿಂಹ ಸ್ಥಳಕ್ಕೆ ಬಂದು ರೈತರು ಹಾಗೂ ಮುಖಂಡರು ಬಂದು ಮನವಿ ಆಲಿಸಿದರು.

ಸಾಹಿತಿ ದೇವನೂರ ಮಹಾದೇವ, ಎಸ್‌.ಆರ್‌.ಹಿರೇಮಠ, ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT