ಗುರುವಾರ , ಮೇ 19, 2022
25 °C

ಮೀಸಲಾತಿ ವಿಚಾರದಲ್ಲಿ ಮಠಾಧೀಶರು ಒತ್ತಡ ತರಬಾರದು: ಪುಟ್ಟಸ್ವಾಮಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸರಗೂರು: ‘ಮೀಸಲಾತಿ ವಿಚಾರದಲ್ಲಿ ಮಠಾಧೀಶರು ಸಮಾಜದಲ್ಲಿ ತುಳಿತಕ್ಕೆ ಒಳಗಾದ, ಬಡತನದಲ್ಲಿರುವ ಜಾತಿ ಪರ ಇರಬೇಕೆ? ಹೊರತು ತಮ್ಮ ಜಾತಿ- ವರ್ಗವನ್ನು ವಹಿಸಿಕೊಂಡು ಮುಖ್ಯಮಂತ್ರಿಗಳಿಗೆ ಒತ್ತಡ ತರುವಂಥ ಕೆಲಸ ಮಾಡಬಾರದು’ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಮನವಿ ಮಾಡಿದರು.

ಪಟ್ಟಣದಲ್ಲಿ ಶ್ರೀ ಮಹಾಗಣಪತಿ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಸೋಮವಾರ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಂದುವರಿದ ಪ್ರತಿ ಜನಾಂಗದವರೂ ತಮಗೂ ಅಭಿವೃದ್ಧಿ ನಿಗಮ ಕೊಡಿ ಎಂದು ಕೇಳುತ್ತಿದ್ದಾರೆ. ಹೀಗಾದರೆ ಹಿಂದುಳಿದ ಸಣ್ಣ-ಪುಟ್ಟ ಜಾತಿಗಳ ಗತಿ ಏನು’ ಎಂದು ಪ್ರಶ್ನಿಸಿದರು.

‘ಕೆಲ ಜನಾಂಗದವರಿಗೆ ಮಾತನಾಡುವ ಶಕ್ತಿ ಇಲ್ಲ. ಅವರಲ್ಲಿ ಯಾರೂ ಶಾಸಕರಿಲ್ಲ.  ಮಂತ್ರಿಗಳಾಗಿದ್ದವರು ಅವರ ಜಾತಿ ಪರ ಬೀದಿಗಳಿದರೆ ಉಳಿದವರ ಪಾಡೇನು? ಸಿದ್ದಗಂಗಾ ಮಠ, ಸುತ್ತೂರು ಮಠದ ಸ್ವಾಮೀಜಿಗಳು ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ ಮೀಸಲಾತಿಯಲ್ಲಿ ಮೊದಲನೇ ಆದ್ಯತೆ ನೀಡಲಿ ಎಂದಿದ್ದಾರೆ. ಇದರ ಪರವಾಗಿ ಇರುವಂಥವನು ನಾನು. ಹೀಗಾಗಿ ರಾಜ್ಯದ ವಿವಿಧ ಮಠಾಧೀಶರು ತಮ್ಮ ವರ್ಗವನ್ನು ವಹಿಸಿಕೊಂಡು ಮೀಸಲಾತಿಗಾಗಿ ಮುಖ್ಯಮಂತ್ರಿಗಳಿಗೆ ಒತ್ತಡ ತರಬಾರದು. ಮೀಸಲಾತಿ ಜಾರಿ ಅವರ ಕೈಲಿಲ್ಲ’  ಎಂದು ‌ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು