ಶುಕ್ರವಾರ, ಏಪ್ರಿಲ್ 16, 2021
31 °C

ಮೈಸೂರು: ಮೇಯರ್‌ ಆದ ಪತ್ನಿ, ಸಂತಸದಲ್ಲಿ ಸಭಾಂಗಣದಲ್ಲೇ ಮುತ್ತಿಟ್ಟ ಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪತಿ ಮಾದೇಗೌಡ ಅವರು ಮೇಯರ್‌ ಆಗಿರುವ ಪತ್ನಿ ರುಕ್ಮಿಣಿಗೆ ಮುತ್ತು ಕೊಟ್ಟರು

ಮೈಸೂರು: ಪತ್ನಿ ಮಹಾನಗರ ಪಾಲಿಕೆಯ ಮೇಯರ್‌ ಆದ ಖುಷಿಯಲ್ಲಿ ಪಾಲಿಕೆ ಸಭಾಂಗಣದಲ್ಲಿ ಪತಿ ಮಾದೇಗೌಡ ಅವರು ಪತ್ನಿ ರುಕ್ಮಿಣಿಗೆ ಮುತ್ತು ಕೊಟ್ಟರು.

ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 23ನೇ ಮೇಯರ್ ಆಗಿ ಜೆಡಿಎಸ್ ಸದಸ್ಯೆ ರುಕ್ಮಿಣಿ ಮಾದೇಗೌಡ ಆಯ್ಕೆಯಾಗಿದ್ದಾರೆ. ಪತ್ನಿ ರುಕ್ಮಿಣಿ ಮೇಯರ್‌ ಆದ ಸಂತಸದಲ್ಲಿ ಬಹಿರಂಗವಾಗಿ ಪತಿ ಮಾದೇಗೌಡ ಮುತ್ತು ಕೊಟ್ಟು, ಅವರನ್ನು ಹೊತ್ತು ಸಂಭ್ರಮಿಸಿದರು.

ಕಾಂಗ್ರೆಸ್ ಬೆಂಬಲದಿಂದ ಜೆಡಿಎಸ್‌ನ ರುಕ್ಮಿಣಿ ಮಾದೇಗೌಡ ಮೇಯರ್ ಆದರೆ, ಜೆಡಿಎಸ್ ಬೆಂಬಲದಿಂದ ಕಾಂಗ್ರೆಸ್ ಪಕ್ಷದ ಅನ್ವರ್ ಬೇಗ್ ( ಅಫ್ತಾಬ್) ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಒಟ್ಟು 73 ಸದಸ್ಯರ ಬಲ ಹೊಂದಿರುವ ಪಾಲಿಕೆಯಲ್ಲಿ ಅಂತಿಮವಾಗಿ ರುಕ್ಮಿಣಿ ಮಾದೇಗೌಡ ಪರ 43 ಮತಗಳು ಲಭಿಸಿದರೆ, ಬಿಜೆಪಿಯ ಸುನಂದಾ ಪಾಲನೇತ್ರ 26 ಮತಗಳನ್ನು ಪಡೆದರು, ಕಾಂಗ್ರೆಸ್‌ನ ಶಾಂತಕುಮಾರಿ ಪರ ಯಾರೂ ಮತ ಚಲಾಯಿಸಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು