ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಟದ ಸ್ಪರ್ಧೆ: ದಕ್ಷತ್, ತುಳಸಿ ಪ್ರಥಮ

Last Updated 13 ಆಗಸ್ಟ್ 2022, 10:29 IST
ಅಕ್ಷರ ಗಾತ್ರ

ಮೈಸೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ನಗರದ ಜಯಲಕ್ಷ್ಮೀಪುರಂನ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ, ಎನ್‌ಸಿಸಿ, ಎನ್‌ಎಸ್‌ಎಸ್‌ ಘಟಕ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಓಟದ ಸ್ಪರ್ಧೆ ನಡೆಸಲಾಯಿತು.

ಸೋಮಾನಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸದಾಶಿವ ಭಟ್‌ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಓಟಕ್ಕೆ ಚಾಲನೆ ನೀಡಿದರು. ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್.ತಿಮ್ಮೇಗೌಡ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಡಾ.ಭಾಸ್ಕರ್ ಮತ್ತು ಮಧುಸೂದನ್, ಎನ್‌ಸಿಸಿ ಅಧಿಕಾರಿಗಳಾದ ಕ್ಯಾಪ್ಟನ್ ನಿಖಿಲ್ ಬಿ.ಆರ್. ಮತ್ತು ಲೆಫ್ಟಿನೆಂಟ್ ಎಂ.ಆರ್.ಇಂದ್ರಾಣಿ, ಎನ್‌ಎಸ್ಎಸ್‌ ಯೋಜನೆ ಘಟಕ 1 ಮತ್ತು 2ರ ಸಂಚಾಲಕ ಡಾ.ದೊಡ್ಡರಸಯ್ಯ ಜಿ. ಮತ್ತು ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸೋಮಶೇಖರ್ ಕೆ.ಕೆ. ಪಾಲ್ಗೊಂಡಿದ್ದರು.

ಫಲಿತಾಂಶ ಇಂತಿದೆ (ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದವರು)
ಮಹಾಜನ ಪ್ರೌಢಶಾಲೆ ಕಿರಿಯ ವಿದ್ಯಾರ್ಥಿಗಳ ವಿಭಾಗ: ದಕ್ಷತ್ ಪಿ., ಹಿತೇಷ್ ಬಿ.ಎಲ್. ಮತ್ತು ದುರ್ಗಪ್ರಸಾದ್ ಎಚ್.ಪಿ.
ಮಹಾಜನ ಪ್ರೌಢಶಾಲೆ ಕಿರಿಯ ವಿದ್ಯಾರ್ಥಿನಿಯರ ವಿಭಾಗ: ತುಳಸಿ ಕೆ.ಆರ್., ವಿನುತಾ ಸಿ., ಸಂಗೀತಾ ಕೆ.ಟಿ.
ಕಾಲೇಜು ವಿದ್ಯಾರ್ಥಿಗಳ ವಿಭಾಗ: ಮಿಲಿಂದ್ ಎಸ್. ಪ್ರಸಾದ್, ಸಾಗರ್ ಎಂ.ಕೆ., ಹೇಮಂತ್ ಎಂ.ಎಸ್.
ಕಾಲೇಜು ವಿದ್ಯಾರ್ಥಿನಿಯರ ವಿಭಾಗ: ನಿಸ್ಸಿ ಮೊಲ್, ಹರ್ಷಿನಿ ಚಿತಿಯಾರ್ ಆರ್., ನಿಸ್ಸಿ ಫಿಲಿಪ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT