ಮಂಗಳವಾರ, ಅಕ್ಟೋಬರ್ 27, 2020
28 °C
ಸಾಹಿತಿ ಸಂಸ ಕುರಿತು ಮಲೆಯೂರು ಗುರುಸ್ವಾಮಿ ಬರೆದ ಕೃತಿ

‘ಸಂಸ’ ಕಾದಂಬರಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸಂಸ ಅವರ ವ್ಯಕ್ವಿತ್ವ, ಮನಸ್ಸು ಸಂಕೀರ್ಣವಾದದ್ದು. ಅಂತಹ ವ್ಯಕ್ತಿಯ ಕುರಿತು ಕಾದಂಬರಿ ಬರೆಯುವುದು ಸವಾಲಿನ ಸಂಗತಿ. ಅದರೆ ಮಲೆಯೂರು ಗುರುಸ್ವಾಮಿ ಅವರು ಸವಾಲಿನ ಕೆಲಸವನ್ನು ಯಶಸ್ವಿ ಯಾಗಿ ಮಾಡಿದ್ದಾರೆ ಎಂದು ಸಾಹಿತಿ ಸಿ.ಪಿ.ಕೃಷ್ಣಕುಮಾರ್‌ ಶ್ಲಾಘಿಸಿದರು.

ಸಂವಹನ ಪ್ರಕಾಶನ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ `ಸಂಸ' ಕಾದಂಬರಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಸ ಅವರು ಮನೋ ವೈಕಲ್ಯದ ನಡುವೆಯೂ ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ಧಾರೆ. ಸಂಸ ಪ್ರತಿಭಾವಂತರಾಗಿದ್ದರು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ಅವರ ಪ್ರತಿಭೆ ಪೂರ್ಣರೂಪದಲ್ಲಿ ಹೊರ ಬರಲಿಲ್ಲ. ಕೆಲವು ಪಾಶ್ಚಾತ್ಯ ಸಾಹಿತಿಗಳೂ ಇದೇ ರೀತಿಯ ಮನೋವೈಕಲ್ಯದ ಸಮಸ್ಯೆ ಎದುರಿಸಿದ್ದರು ಎಂದು ತಿಳಿಸಿದರು.

‘ಈ ಕಾದಂಬರಿ ಓದಿದರೆ ಪ್ರತಿಯೊಬ್ಬರಿಗೂ ಸಂಸ ಅವರು ಕಾಡುವುದು ನಿಶ್ಚಿತ. ನನಗೂ ಅದೇ ಅನುಭವ ಉಂಟಾಗಿದೆ’ ಎಂದರು.

ಸಂಸ್ಕೃತಿ ಚಿಂತಕ ಮಹೇಶ್ ಹರವೆ ಮಾತನಾಡಿ, ಜನರಿಗೆ ಸಂಸ ಅವರ ಬಗ್ಗೆ ಭಯ, ಗೌರವ ಇತ್ತು. ಈ ಕಾರಣ ಅವರೊಂದಿಗೆ ಮಾತನಾಡುವಾಗ ಎಲ್ಲರೂ ಸದಾ ಎಚ್ಚರಿಕೆಯಿಂದ ಇರುತ್ತಿದ್ದರು. ಅವರು ಏನು ಅಂದುಬಿಡುತ್ತಾರೋ ಎಂಬ ಭಯ ಮನಸ್ಸಿನ ಮೂಲೆಯಲ್ಲಿ ಇರುತ್ತಿತ್ತು ಎಂದು ಹೇಳಿದರು.

ಸಂಸ ಅವರು ಜನರೊಂದಿಗೆ ಬೆರೆತು, ತಮಗೆ ಆದ ಅನುಭವಗಳಿಗೆ ಪುಸ್ತಕದ ರೂಪ ಕೊಟ್ಟಿದ್ದಾರೆ. ಸಾಹಿತ್ಯವನ್ನು ಸಮುದಾಯದಿಂದ ಪಡೆದು ವಾಪಸ್‌ ಸಮುದಾಯಕ್ಕೆ ನೀಡಬೇಕು ಎಂಬ ನಿಲುವು ಅವರದ್ದಾಗಿತ್ತು ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್ ಹಂಚೆ ಕೃತಿ ಬಿಡುಗಡೆ ಮಾಡಿದರು. ಕಾದಂಬರಿಕಾರ ಪ್ರೊ.ಮಲೆಯೂರು ಗುರುಸ್ವಾಮಿ, ಪ್ರಕಾಶಕ ಡಿ.ಎನ್. ಲೋಕಪ್ಪ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು