ಶಾಮನೂರು ಶಿವಶಂಕರಪ್ಪ ನನ್ನ ತಂದೆಗೆ ಸಮಾನರು: ಎಂ.ಬಿ.ಪಾಟೀಲ

7

ಶಾಮನೂರು ಶಿವಶಂಕರಪ್ಪ ನನ್ನ ತಂದೆಗೆ ಸಮಾನರು: ಎಂ.ಬಿ.ಪಾಟೀಲ

Published:
Updated:

ಮೈಸೂರು: ‘ಶಾಮನೂರು ಶಿವಶಂಕರಪ್ಪ ನನ್ನ ತಂದೆಗೆ ಸಮಾನರು. ತಿಳಿದೋ ತಿಳಿಯದೆಯೋ ಅವರು ಹೇಳಿಕೆ ಕೊಟ್ಟಿದ್ದರು. ಸ್ವಾಭಾವಿಕವಾಗಿ ಅದಕ್ಕೆ ಪ್ರತಿಕ್ರಿಯೆಯನ್ನೂ ನೀಡಿದ್ದೇನೆ. ಆ ವಿಚಾರ ಈಗ ಮುಗಿದ ಅಧ್ಯಾಯ’ ಎಂದು ಗೃಹಸಚಿವ ಎಂ.ಬಿ.ಪಾಟೀಲ ಹೇಳಿದರು.

ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ‘ಹಿರಿಯರಾದ ಶಿವಶಂಕರಪ್ಪ ಯಾವುದೋ ಒಂದು ಸಿದ್ಧಾಂತದ ಮೇಲೆ ಹೇಳಿಕೆ ಕೊಟ್ಟಿದ್ದರೆ ನಾನು ಪ್ರತಿಕ್ರಿಯಿಸುತ್ತಿರಲಿಲ್ಲ. ಹಿರಿಯರು ಎಂದು ಸುಮ್ಮನಿರುತ್ತಿದ್ದೆ. ಆದರೆ ವೈಯಕ್ತಿಕವಾಗಿ ಟೀಕೆ ಮಾಡಿದ್ದರಿಂದ ಅದಕ್ಕೆ ಉತ್ತರ ಕೊಟ್ಟಿದ್ದೇನೆ. ಆ ಕುರಿತ ಚರ್ಚೆಯನ್ನು ಇಲ್ಲಿಗೆ ಕೊನೆಗೊಳಿಸುತ್ತೇನೆ’ ಎಂದರು.

ಇದನ್ನೂ ಓದಿ... ಶಾಮನೂರು - ಪಾಟೀಲ ಬೈಗುಳ ಜಗಳಬಂದಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !