ಮಂಗಳವಾರ, ಫೆಬ್ರವರಿ 18, 2020
15 °C

ಮಸೂದೆ ವಿರೋಧಿಸಿ ತೃತೀಯ ಲಿಂಗಿಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೇಂದ್ರ ಸರ್ಕಾರ ಜಾರಿಗೆ ತರುತ್ತಿರುವ ತೃತೀಯ ಲಿಂಗಿಗಳ ಮಸೂದೆ ವಿರುದ್ಧ ಆಶೋದಯ ಸಮಿತಿಯ ನೇತೃತ್ವದಲ್ಲಿ ತೃತೀಯ ಲಿಂಗಿಗಳು ನಗರದಲ್ಲಿ ಪ್ರತಿಭಟನಾ ಜಾಥಾ ನಡೆಸಿದರು.

ಈ ಮಸೂದೆಯಲ್ಲಿರುವ ಹಲವು ಅಂಶಗಳು ತೃತೀಯ ಲಿಂಗಿಗಳ ಪಾಲಿಗೆ ಕರಾಳ ಎನಿಸಿವೆ. ಕೂಡಲೇ ಈ ಮಸೂದೆಯನ್ನು ವಾಪಸ್ ಪಡೆಯಬೇಕು ಎಂದು ಅವರು ಒಕ್ಕೊರಲಿನಿಂದ ಆಗ್ರಹಿಸಿದರು.

ತೃತೀಯ ಲಿಂಗಿಗಳೆಂದು ಕೇವಲ ವ್ಯಕ್ತಿಯ ಬಾಹ್ಯ ಲಕ್ಷಣಗಳ ಆಧಾರದ ಮೇಲೆ ಹೇಳುವುದು, ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ಪ್ರಮಾಣಪತ್ರ ನೀಡುವುದು ಸೇರಿದಂತೆ ಹಲವು ಅಂಶಗಳು ತೀರಾ ಅವೈಜ್ಞಾನಿಕವಾಗಿದೆ ಹಾಗೂ ಗೌಪ‍್ಯತೆ ಇದರಲ್ಲಿ ಇಲ್ಲ ಎಂದು ಅವರು ಆರೋಪಿಸಿದರು.

ತೃತೀಯ ಲಿಂಗಿಗಳಿಗೆ ಉದ್ಯೋಗ, ಶಿಕ್ಷಣಗಳಲ್ಲಿ ತಾರತಮ್ಯ ಮಾಡಬಾರದು ಎಂದು ಮಸೂದೆ ಹೇಳಿದೆ. ಆದರೆ, ಮೀಸಲಾತಿಯನ್ನು ಕಲ್ಪಿಸಿಲ್ಲ. ಮೀಸಲಾತಿ ಇಲ್ಲದೇ ಉದ್ಯೋಗವಾಗಲಿ, ಶಿಕ್ಷಣವಾಗಲಿ ತೃತೀಯ ಲಿಂಗಿಗಳಿಗೆ ಸಿಗುವುದು ದುಸ್ತರ ಎಂದು ಅವರು ಅಭಿಪ್ರಾಯಪ‍ಟ್ಟರು.

ಕೂಡಲೇ ಈ ಮಸೂದೆ ಕುರಿತು ಹೆಚ್ಚಿನ ಚರ್ಚೆಯಾಗಬೇಕು. ಹಲವು ಅಂಶಗಳು ಬದಲಾವಣೆಯಾಗಬೇಕಿದೆ. ತರಾತುರಿಯಲ್ಲಿ ಈ ಮಸೂದೆ ಜಾರಿ ಬೇಡ ಎಂದು ಅವರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು