ಶನಿವಾರ, ಡಿಸೆಂಬರ್ 5, 2020
19 °C

ಮೈಸೂರು| ದಂತಚೋರರ ಬಂಧನ: 25 ಕೆ.ಜಿ ಆನೆದಂತ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಅಂತರರಾಜ್ಯ ದಂತಚೋರ ಸೇರಿದಂತೆ ನಾಲ್ವರನ್ನು ಇಲ್ಲಿನ ಅರಣ್ಯ ಸಂಚಾರ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಇವರಿಂದ 25 ಕೆ.ಜಿ ತೂಕದ ಆನೆದಂತಗಳನ್ನು ವಶಪಡಿಸಿಕೊಂಡಿದ್ದಾರೆ.

ತಿರುವನಂತಪುರದ ಪ್ರೆಸ್ಟಿನ್ ಸೆಲ್ವ, ಜಯಪ್ರಕಾಶ್‌, ಇಲ್ಲಿನ ಉದಯಗಿರಿಯ ನಿವಾಸಿಗಳಾದ ಮೋಹನ್ ಮತ್ತು ರಮೇಶ್ ಬಂಧಿತರು.

ಬನ್ನಿಮಂಪಟದ ಕೆಳಸೇತುವೆ ಬಳಿ ಇವರು 4 ಆನೆದಂತಗಳನ್ನು 8 ಭಾಗಗಳನ್ನಾಗಿ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಒಂದು ಕೆ.ಜಿಗೆ ₹ 20 ಸಾವಿರದಂತೆ ಮಾರಾಟ ಮಾಡುತ್ತಿದ್ದರು. ಇವರಲ್ಲಿ ಪ್ರೆಸ್ಟಿನ್ ಸೆಲ್ವ ವಿರುದ್ಧ ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ. ರಮೇಶ್ ಮತ್ತು ಮೋಹನ್ ವಿಗ್ರಹ ಕೆತ್ತುವ ಕಲಾವಿದರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿಸಿಎಫ್ ಎ.ಟಿ.ಪೂವಯ್ಯ, ಎಸಿಎಫ್ ಸುವರ್ಣ, ಆರ್‌ಎಫ್‌ಒ ವಿವೇಕ್, ಸಿಬ್ಬಂದಿಯಾದ ಮೋಹನ್, ಲಕ್ಷ್ಮೀಶ್, ಸುಂದರ್, ಪ್ರಮೋದ್, ತುಷಾರಾ, ಸ್ನೇಹಾ, ಮೇಘನಾ, ಚನ್ನಬಸವಯ್ಯ, ಗೋವಿಂದ, ರವಿನಂದನ್, ರವಿಕುಮಾರ್, ಮಹಾಂತೇಶ್, ಮಧು, ಪುಟ್ಟಸ್ವಾಮಿ, ಕೊಟ್ರೇಶ ಪೂಜಾರ್, ವಿರೂಪಾಕ್ಷ ಕಾರ್ಯಾಚರಣೆ ತಂಡದಲ್ಲಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು