ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಅಂಗವೈಕಲ್ಯ, ಪುನರ್ವಸತಿ ಅಧ್ಯಯನ ವಿಭಾಗ ಆರಂಭ

ಮೈಸೂರು ವಿಶ್ವವಿದ್ಯಾಲಯದಲ್ಲಿ ಮೊದಲ ಪ್ರಯತ್ನ
Last Updated 4 ಡಿಸೆಂಬರ್ 2019, 9:04 IST
ಅಕ್ಷರ ಗಾತ್ರ

ಮೈಸೂರು: ರಾಜ್ಯದ ವಿಶ್ವವಿದ್ಯಾಲಯಗಳ ಪೈಕಿ ಮೊದಲ ಪ್ರಯತ್ನವಾಗಿ ಮೈಸೂರು ವಿಶ್ವವಿದ್ಯಾಲಯವು 2020–21ನೇ ಶೈಕ್ಷಣಿಕ ಸಾಲಿನಿಂದ ಅಂಗವೈಕಲ್ಯ ಮತ್ತು ಪುನವರ್ಸತಿ ಅಧ್ಯಯನ ವಿಭಾಗವನ್ನು ಆರಂಭಿಸಲು ತೀರ್ಮಾನಿಸಿದೆ.

ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಯುಮೈಸೂರು ವಿ.ವಿ.ಗೆ ವಿಭಾಗವನ್ನು ಶುರುಮಾಡುವಂತೆ ಪ್ರಸ್ತಾವ ಸಲ್ಲಿಸಿತ್ತು. ದೈಹಿಕ ಶಿಕ್ಷಣ ವಿಭಾಗದ ಅಡಿಯಲ್ಲಿ ಈ ವಿಭಾಗವನ್ನು ಆರಂಭಿಸುವಂತೆ ಬುಧವಾರ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು.

‘ಅಂಗವಿಲಕರ ಬಗ್ಗೆ ವಿಭಾಗದಲ್ಲಿ ಅಧ್ಯಯನ ನಡೆಯಲಿದೆ. ಸ್ನಾತಕ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳನ್ನು ನಡೆಸಲಾಗುವುದು’ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

‘ಮೈಸೂರು ವಿ.ವಿ.ಯಲ್ಲಿ ಅಂಗವಿಕಲರ ಅಧ್ಯಯನಕ್ಕಾಗಿ ಈಗಾಗಲೇ ಸಾಕಷ್ಟು ಮೂಲಸೌಕರ್ಯಗಳಿವೆ. ಇವನ್ನು ಬಳಸಿಕೊಳ್ಳುವ ಜತೆಗೆ ಹೊಸ ಸೌಲಭ್ಯಗಳನ್ನೂ ಸೃಷ್ಟಿಸಿ ಅಂಗವಿಕಲರ ಶ್ರೇಯಸ್ಸಿಗೆ ಆದ್ಯತೆ ನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT