ಬುಧವಾರ, ಡಿಸೆಂಬರ್ 2, 2020
23 °C

‘ವರ್ಚುವಲ್‌’ ಪಂಚಲಿಂಗ ದರ್ಶನಕ್ಕೆ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ತಲಕಾಡು ಕ್ಷೇತ್ರದಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ಪಂಚಲಿಂಗ ದರ್ಶನ ಮಹೋತ್ಸವವನ್ನು ಮೈಸೂರು ದಸರಾ ರೀತಿಯಲ್ಲಿ ಸರಳವಾಗಿ ಹಾಗೂ ವರ್ಚುವಲ್‌ ವೇದಿಕೆಯಲ್ಲಿ ನಡೆಸಲು ಚಿಂತಿಸಲಾಗಿದೆ.

ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಅಧ್ಯಕ್ಷತೆಯಲ್ಲಿ ಪಂಚಲಿಂಗ ದರ್ಶನ ಮಹೋತ್ಸವ ಕುರಿತು ಬುಧವಾರ ಪೂರ್ವಭಾವಿ ಸಭೆ ನಡೆಯಿತು.

‘ಕೋವಿಡ್‌ ಕಾರಣ ದಸರೆಯನ್ನು ಸರಳವಾಗಿ ನಡೆಸಲಾಗಿದೆ. ಏಳು ಲಕ್ಷಕ್ಕೂ ಅಧಿಕ ಮಂದಿ ದಸರಾ ಕಾರ್ಯಕ್ರಮಗಳನ್ನು ಅನ್‌ಲೈನ್ ಮೂಲಕ ವೀಕ್ಷಿಸಿದ್ದಾರೆ. ಪಂಚಲಿಂಗದರ್ಶನ ಮಹೋತ್ಸವವನ್ನು ಕೂಡ ಅದೇ ಮಾದರಿಯಲ್ಲಿ ನಡೆಸುವುದು ನಮ್ಮ ಉದ್ದೇಶ’ ಎಂದು ಸಚಿವರು ತಿಳಿಸಿದರು.

‘ತಜ್ಞರ ಸಮಿತಿಯೊಂದನ್ನು ರಚಿಸಲಿದ್ದು, ಸಮಿತಿಯು ತಲಕಾಡಿಗೆ ಭೇಟಿ ನೀಡಲಿದೆ. ತಜ್ಞರು ನೀಡುವ ವರದಿ ಆಧಾರದಲ್ಲಿ ಎಷ್ಟು ಜನರನ್ನು ಸೇರಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಮುಖ್ಯಮಂತ್ರಿ ಜತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.

‘2013 ರಲ್ಲಿ ಕೊನೆಯದಾಗಿ ಪಂಚಲಿಂಗದರ್ಶನ ಮಹೋತ್ಸವ ನಡೆದಿತ್ತು. ಅಂದು ಸುಮಾರು 20 ಲಕ್ಷ ಜನರು ಪಾಲ್ಗೊಂಡಿದ್ದರು. ಕೋವಿಡ್‌ ಇರುವುದರಿಂದ ಈ ಬಾರಿ ಎಚ್ಚರವಹಿಸಬೇಕಿದೆ’ ಎಂದರು.

ಪಂಚಲಿಂಗ ದರ್ಶನ ಕಾರ್ಯಕ್ರಮಗಳು ಡಿ.10 ರಿಂದ 19ರ ವರೆಗೆ ನಡೆಯಲಿವೆ. ಡಿ.14 ರಂದು ಪಂಚಲಿಂಗ ದರ್ಶನ ಮಹೋತ್ಸವ ಇರಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.