ಶುಕ್ರವಾರ, ಆಗಸ್ಟ್ 19, 2022
27 °C
ಜೆಡಿಎಸ್‌ ವಕ್ತಾರ ಎನ್.ಆರ್.ರವಿಚಂದ್ರೇಗೌಡ ‍ಪ್ರಶ್ನೆ

‘ವಿಶ್ವನಾಥ್‌ಗೆ ಬಿಜೆಪಿಯವರು ನೀಡಿದ ಮಿಠಾಯಿ ಯಾವುದು?’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಎಚ್.ವಿಶ್ವನಾಥ್

ಮೈಸೂರು: ಬಿಜೆಪಿ ಮುಂಬೈನಲ್ಲಿ ನೀಡಿರುವ ಮಿಠಾಯಿ ಯಾವುದು ಎಂಬುದನ್ನು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಬಹಿರಂಗಪಡಿಸಬೇಕು ಎಂದು ಜೆಡಿಎಸ್‌ ರಾಜ್ಯ ಘಟಕದ ವಕ್ತಾರ ಎನ್.ಆರ್.ರವಿಚಂದ್ರೇಗೌಡ ಒತ್ತಾಯಿಸಿದರು.

‘ಕಾಂಗ್ರೆಸ್‌ನಲ್ಲಿದ್ದಾಗ ಕಾಂಗ್ರೆಸ್‌ ತಾಯಿ ಎಂದು, ಜೆಡಿಎಸ್‌ಗೆ ಬಂದಾಗ ಎಚ್.ಡಿ.ದೇವೇಗೌಡ ತಂದೆ ಸಮಾನರೆಂದು ವಿಶ್ವನಾಥ್ ಹೇಳಿದ್ದರು. ಈಗ ತಾವು ಯಾರ ಮಗು ಎಂಬುದನ್ನು ಅವರೇ ಹೇಳಬೇಕು. ಬಿಜೆಪಿಯಲ್ಲಿರುವ ಅವರಿಗೆ ನರೇಂದ್ರ ಮೋದಿ ಏನಾಗಬೇಕು ಎನ್ನುವುದನ್ನೂ ನಮಗೆ ತಿಳಿಸಬೇಕು’ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.‌

ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ವಿಶ್ವನಾಥ್ ಅವರನ್ನು ಅನರ್ಹ ಶಾಸಕ ಎಂದು ಹೇಳಿದೆ. ವಕೀಲರೂ ಆಗಿರುವ ಅವರಿಗೆ ಈ ಆದೇಶದ ಅರಿವಿದೆ. ಹೀಗಿದ್ದರೂ, ಅವರು ವಿಧಾನಪರಿಷತ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ನ್ಯಾಯಾಲಯದ ಆದೇಶದ ಬಗ್ಗೆ ಗೌರವ ಇದ್ದರೆ, ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ, ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು