ಬುಧವಾರ, ಏಪ್ರಿಲ್ 14, 2021
31 °C

ಪಕ್ಷದಲ್ಲಿ ಒಡಕಿದೆ ಎಂಬ ಸಂದೇಶವನ್ನು ಈ ಬೆಳವಣಿಗೆಗಳು ರವಾನಿಸುತ್ತವೆ- ಡಾ.ಯತೀಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮಗ ಡಾ.ಯತೀಂದ್ರ

ಚಾಮರಾಜನಗರ: 'ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ‌ ನಡೆದಿರುವ ಬೆಳವಣಿಗೆ ದುರದೃಷ್ಟಕರ. ಪಕ್ಷದ ನಾಯಕರೊಬ್ಬರಿಗೆ ಹಿನ್ನಡೆ ಮಾಡಬೇಕು ಎಂಬ ಕಾರಣಕ್ಕೆ ನಮ್ಮ ಪಕ್ಷದ ಮುಖಂಡರೇ ಸೇರಿ ಮಾಡಿರುವ ಕೆಲಸ ಇದು' ಎಂದು ವರುಣಾ ಕ್ಷೇತ್ರದ ಶಾಸಕ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮಗ ಡಾ.ಯತೀಂದ್ರ ಅವರು ಹೇಳಿದರು.

ನಗರದಲ್ಲಿ‌ ನಡೆದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, 'ಇಂತಹದ್ದು ನಡೆಯ ಬಾರದು. ಪಕ್ಷದಲ್ಲಿ ಒಡಕಿದೆ ಎಂಬ ಸಂದೇಶವನ್ನು ಇಂತಹ ಬೆಳವಣಿಗೆಗಳು ರವಾನಿಸುತ್ತವೆ' ಎಂದರು.

'ಇಂತಹ ಘಟನೆಗಳು ರಾಜ್ಯದಲ್ಲಿ ಎಲ್ಲೂ ಮರುಕಳಿಸಬಾರದು. ಎಲ್ಲ‌ ಮುಖಂಡರು ಒಗ್ಗಟ್ಟಾಗಿರುವಂತೆ ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು ನೋಡಿಕೊಳ್ಳಬೇಕು ಎಂದು‌ ಮನವಿ ಮಾಡುತ್ತೇನೆ' ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು