ಭಾನುವಾರ, ಅಕ್ಟೋಬರ್ 2, 2022
21 °C

ಯುವ ದಸರಾದಲ್ಲಿ ಈ ಬಾರಿಯ ವಿಶೇಷತೆಗಳೇನು? ಇಲ್ಲಿದೆ ಸಂಪೂರ್ಣ ವಿವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಸೆ.27ರಿಂದ ಅ.3ರವರೆಗೆ ನಿತ್ಯ ಸಂಜೆ 6ರಿಂದ ರಾತ್ರಿ 10ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಆಯೋಜಿಸಲಾಗಿದೆ’ ಎಂದು ಯುವ ದಸರಾ ಉಪ ಸಮಿತಿ ವಿಶೇಷಾಧಿಕಾರಿಯೂ ಆಗಿರುವ ಎಸ್ಪಿ ಆರ್.ಚೇತನ್ ತಿಳಿಸಿದರು.

‘27ರಂದು ಸಂಜೆ 6ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಖ್ಯಾತ ನಟ ಸುದೀಪ್‌ ಆಗಮಿಸಲಿದ್ದಾರೆ. ಶಾಸಕ ಎಲ್. ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಅಂದು ಸಂಜೆ 7.30ರಿಂದ 8ರವರೆಗೆ ಮೈಸೂನ ಶ್ರೀಧರ್ ಜೈನ್‌ ತಂಡ, 8ರಿಂದ 9ರವರೆಗೆ ಸಂಗೀತ ನಿರ್ದೇಶಕ–ಗಾಯಕ ರಘು ದೀಕ್ಷಿತ್‌ ಮತ್ತು 9ರಿಂದ 10ರವರೆಗೆ ಗಾಯಕಿ ಮಂಗ್ಲಿ ಬಾಯಿ ಕಾರ್ಯಕ್ರಮ ನೀಡಲಿದ್ದಾರೆ’ ಎಂದು ಹೇಳಿದರು.

* ಸೆ.28: ಸಂಜೆ 6ರಿಂದ 6.30: ಯುವ ಸಂಭ್ರಮ ವಿಜೇತರಿಂದ, ಸಂಜೆ 6.30ರಿಂದ 7ರವರೆಗೆ ಸ್ಥಳೀಯ ನೃತ್ಯ ತಂಡಗಳು. ಸಂಜೆ 7ರಿಂದ 10ರವರೆಗೆ ‘ಅಪ್ಪು ನಮನ’ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಗುರುಕಿರಣ್, ವಿಜಯ್‌ಪ್ರಕಾಶ್ ಮತ್ತು ಕುನಾಲ್ ಗಾಂಜಾವಾಲ.

* ಸೆ.29: ಸಂಜೆ 6ರಿಂದ 6.30: ಯುವ ಸಂಭ್ರಮ ವಿಜೇತರಿಂದ, ಸಂಜೆ 6.30ರಿಂದ 7ರವರೆಗೆ ಸ್ಥಳೀಯ ನೃತ್ಯ ತಂಡಗಳು. ಸಂಜೆ 7ರಿಂದ 7.20ವರೆಗೆ ಲೇಸರ್ ಷೋ ಇರಲಿದೆ. ಸಂಜೆ 7.20ರಿಂದ 7.30ರವರೆಗೆ ಸಿಗ್ನೇಚರ್‌ ಗ್ರೂಪ್ ಮತ್ತು ತಂಡ, ಸಂಜೆ 7.30ರಿಂದ 10ರವರೆಗೆ ಕನ್ನಿಕಾ ಕಪೂರ್ ಮತ್ತು ಅಸೆಂಟ್.

* ಸೆ.30: ಸಂಜೆ 6ರಿಂದ 6.30:ಯುವ ಸಂಭ್ರಮ ವಿಜೇತರಿಂದ, ಸಂಜೆ 6.30ರಿಂದ 7ರವರೆಗೆ ಸ್ಥಳೀಯ ನೃತ್ಯ ತಂಡಗಳು. ಸಂಜೆ 7.30ರಿಂದ ರಾತ್ರಿ 10ರವರೆಗೆ ಸ್ಯಾಂಡಲ್‌ವುಡ್ ನೈಟ್.

* ಅ.1: ಸಂಜೆ 6ರಿಂದ 6.30:ಯುವ ಸಂಭ್ರಮ ವಿಜೇತರಿಂದ. ಸಂಜೆ 6.30ರಿಂದ 8ರವರೆಗೆ ನೃತ್ಯ ರೂಪಕ. ರಾತ್ರಿ 8ರಿಂದ 10ರವರೆಗೆ ಡಾ.ಶಮಿತಾ ಮಲ್ನಾಡ್.

* ಅ.2: ಸಂಜೆ 6ರಿಂದ 6.30:ಯುವ ಸಂಭ್ರಮ ವಿಜೇತರಿಂದ. ಸಂಜೆ 6.30ರಿಂದ 7ರವರೆಗೆ ಪವನ್‌ ಡ್ಯಾನ್ಸರ್ಸ್. ಸಂಜೆ 7ರಿಂದ 8ರವರೆಗೆ ಹರ್ಷಿಕಾ ಪೂಣಚ್ಚ ಮತ್ತು ವಿಜಯ ರಾಘವೇಂದ್ರ. ರಾತ್ರಿ 8ರಿಂದ 10ರವರೆಗೆ ಅಮಿತ್ ತ್ರಿವೇದಿ.

* ಅ.3: ಸಂಜೆ 6ರಿಂದ 6.30:ಯುವ ಸಂಭ್ರಮ ವಿಜೇತರಿಂದ. ಸಂಜೆ 6.30ರಿಂದ 7ರವರೆಗೆ ಸುಪ್ರಿಯಾ ರಾಮ್‌ ಮತ್ತು ಮಹಿಳಾ ಬ್ಯಾಂಡ್ ತಂಡ. ಸಂಜೆ 7.30ರಿಂದ 8ರವರೆಗೆ ಫ್ಯಾಷನ್ ಷೋ. ರಾತ್ರಿ 8ರಿಂದ 10ರವರೆಗೆ ಸುನಿಧಿ ಚವ್ಹಾಣ್.

ಉಪ ಸಮಿತಿಯ ಕಾರ್ಯಾಧ್ಯಕ್ಷ ವೆಂಕಟರಾಜು ಮತ್ತು ನಿಂಗರಾಜು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು