ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್.ಡಿ.ಕೋಟೆ | 31 ಕುಂಟೆ ಸ್ಮಶಾನ ಜಾಗ ಗುರುತು: ತಹಶೀಲ್ದಾರ್‌ ಶ್ರೀನಿವಾಸ

Published : 12 ಸೆಪ್ಟೆಂಬರ್ 2024, 16:06 IST
Last Updated : 12 ಸೆಪ್ಟೆಂಬರ್ 2024, 16:06 IST
ಫಾಲೋ ಮಾಡಿ
Comments

ಎಚ್.ಡಿ.ಕೋಟೆ: ಪಟ್ಟಣದ ಸಿದ್ದಪ್ಪಾಜಿ ರಸ್ತೆಯ ನಿವಾಸಿಗಳಿಗೆ ಸೇರಿದ ಸ್ಮಶಾನದ ನಿವೇಶನವನ್ನು ಉಪ ವಿಭಾಗಾಧಿಕಾರಿ ವಿಜಯಕುಮಾರ್ ನೇತೃತ್ವದಲ್ಲಿ ಗುರುವಾರ ಗುರುತಿಸಲಾಯಿತು.

ಪಟ್ಟಣದ ತಾರಕ ನದಿ ಪಾತ್ರದಲ್ಲಿ ಮತ್ತು ಸಮೀಪದ ಕೆಲವರಿಂದ ಒತ್ತುವರಿಯಗಿದೆ ಎಂದು ಸಿದ್ದಪ್ಪಾಜಿ ರಸ್ತೆಯ ನಿವಾಸಿಗಳು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ವಿಜಯಕುಮಾರ್ ಸ್ವತಃ ಸ್ಥಳದಲ್ಲಿದ್ದು ಸರ್ವೆ ಇಲಾಖೆಯ ಅಧಿಕಾರಿಗಳ ಜೊತೆಯಲ್ಲಿ ಗುರುವಾರ ನಡೆಸಿದ ಸರ್ವೆಯಂತೆ ಒಟ್ಟು 31 ಕುಂಟೆ ಭೂಮಿಯನ್ನು ಗುರುತಿಸಲಾಗಿದೆ ಎಂದು ತಹಶೀಲ್ದಾರ್‌ ಶ್ರೀನಿವಾಸ ಪತ್ರಿಕೆಗೆ ತಿಳಿಸಿದ್ದಾರೆ.

ಮುಖಂಡ ಲಾರಿ ಪ್ರಕಾಶ್ ಮಾತನಾಡಿ, ನಮ್ಮ ನಿರಂತರ ಹೋರಾಟದ ಫಲವಾಗಿ ಆದಿಕಾರಿಗಳು ನಮಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎಂದರು.

ಯಜಮಾನ ಸೋಮಣ್ಣ, ಪುರಸಭಾ ಸದಸ್ಯ ನಂಜಪ್ಪ, ಚಾ. ನಂಜುಂಡಮೂರ್ತಿ, ಸ್ವಾಮಿ, ಎಚ್.ಸಿ‌.ವೆಂಕಟೇಶ, ವೈರಮುಡಿ ಮಂಜು, ಚನ್ನಕೋಟೆ, ಲಾಟರಿ ನಾಗರಾಜು, ಸಿದ್ದರಾಜು, ಸದಾಶಿವ, ಶ್ರೀನಿವಾಸ್, ನಂಜುಂಡಿ, ಆಟೊ ಗುರು, ಹುಚ್ಚಪ್ಪ, ಆಕಾಶ್, ತೇಜು ಗುರುಮಲ್ಲು, ಕೃಷ್ಣ, ಮಹೇಶ, ಪುಟ್ಟಮಾದ, ಸಿಂಗ್ರಯ್ಯ, ಹಾಲಯ್ಯ, ನರಸಿಂಹ, ಮಹಾದೇವಸ್ವಾಮಿ, ಪಾರ್ಥಸಾರಥಿ, ಆಟೊ ರಾಮು, ನಾಗಣ್ಣ, ಸಂದೇಶ, ವರನಂದಮ್ಮ, ಈರಮ್ಮ, ಗೌರಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT