ಮೈಸೂರು: ‘ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ತಳಹದಿಯ ಮೇಲೆ ಕಟ್ಟಿರುವ ದೇಶದ ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಆಯೋಜಿಸಿರುವ ‘ಪ್ರಜಾಪ್ರಭುತ್ವಕ್ಕಾಗಿ ಮಾನವ ಸರಪಳಿ’ ವೇದಿಕೆ ಕಾರ್ಯಕ್ರಮವನ್ನು ಭಾನುವಾರ (ಸೆ.15) ಬೆಳಿಗ್ಗೆ 9ಕ್ಕೆ ಇಲ್ಲಿನ ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ಆಯೋಜಿಸಲಾಗಿದೆ’ ಎಂದು ಜಿಲ್ಲಾಡಳಿತ ತಿಳಿಸಿದೆ.

‘ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ 60 ಸಾವಿರ ಮಂದಿ ಭಾಗಿಯಾಗಲಿದ್ದಾರೆ. 59 ಕಿ.ಮೀ. ಮಾನವ ಸರಪಳಿ ರಚಿಸಲಾಗುವುದು’ ಮಾಹಿತಿ ನೀಡಲಾಗಿದೆ.

‘ಬೆಳಿಗ್ಗೆ 9.30ರಿಂದ 9.37ರವರೆಗೆ ಮಾನವ ಸರಪಳಿಯಲ್ಲಿ ಭಾಗವಹಿಸುವವರು ಸಾಲಿನಲ್ಲಿ ನಿಲ್ಲಬೇಕು. ನಂತರ ನಾಡಗೀತೆ, ಮುಖ್ಯ ಅತಿಥಿಗಳಿಂದ ಭಾಷಣ, ಸಂವಿಧಾನದ ಪ್ರಸ್ತಾವ ಓದುವುದು, ಮಾನವ ಸರಪಳಿಯಲ್ಲಿ ಕೈ–ಕೈ ಹಿಡಿದು ನಿಲ್ಲುವ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10ಕ್ಕೆ ಮಾನವ ಸರಪಳಿಯಲ್ಲಿಯೇ ತಮ್ಮ ಎರಡೂ ಕೈಗಳನ್ನು ಮೇಲೆತ್ತಿ ಜೈಹಿಂದ್, ಜೈ ಕರ್ನಾಟಕ ಎಂಬ ಘೋಷಣೆ ಕೂಗಿ ಸರಪಳಿಯನ್ನು ಕಳಚುವ ಪ್ರಕ್ರಿಯೆ ನಡೆಯಲಿದೆ’ ಎಂದು ತಿಳಿಸಲಾಗಿದೆ.

ಮಾನವ ಸರಪಳಿ ಮಾರ್ಗ:

ಮೈಸೂರು ತಾಲ್ಲೂಕಿನ ಕಳಸ್ತವಾಡಿ ಸಮೀಪದ ಸಿದ್ದಲಿಂಗಪುರದಿಂದ ಪ್ರಾರಂಭವಾಗಿ ಮಣಿಪಾಲ್ ಆಸ್ಪತ್ರೆ, ಫೌಂಟೇನ್ ವೃತ್ತ, ಗಾಂಧಿ ನಗರದ ಅಂಬೇಡ್ಕರ್ ವೃತ್ತ, ಪುರಭವನ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಹಾರ್ಡಿಂಜ್ ಸರ್ಕಲ್, ಮೃಗಾಲಯ, ರೇಸ್ ಕೋರ್ಸ್ ಸರ್ಕಲ್, ಪೊಲೀಸ್ ಭವನ, ಸಂಗೊಳ್ಳಿ ರಾಯಣ್ಣ ಸರ್ಕಲ್, ಕಮಾನ್ ಗೇಟ್, ರಿಂಗ್ ರಸ್ತೆ, ವರುಣ ಗ್ರಾಮ, ಕೀಳನಪುರ, ಕೆಂಪಯ್ಯನಹುಂಡಿ, ಇಂಡುವಾಳು, ಗರ್ಗೇಶ್ವರಿ, ತಿ.ನರಸೀಪುರ ಟೌನ್, ಗಂಜಾಂ ನರಸಿಂಹಸ್ವಾಮಿ ದೇವಸ್ಥಾನ, ಅಲಗೂಡು, ಕುರಬೂರು, ಮಾಡ್ರಳ್ಳಿ ಗೇಟ್, ಮೂಗೂರು ಗ್ರಾಮದ ಮೂಲಕ ಚಾಮರಾಜನಗರ ಜಿಲ್ಲೆಯ ಗಡಿಯನ್ನು ಪ್ರವೇಶಿಸಲಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.