ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಿರಾಳು: ಪರಿಶಿಷ್ಟರಿಗೆ ದೇಗುಲ ಪ್ರವೇಶಕ್ಕೆ ಅವಕಾಶ

Published 24 ಜೂನ್ 2024, 5:19 IST
Last Updated 24 ಜೂನ್ 2024, 5:19 IST
ಅಕ್ಷರ ಗಾತ್ರ

ಮೈಸೂರು: ತಾಲ್ಲೂಕಿನ ವರುಣ ಹೋಬಳಿಯ ಕಿರಾಳು ಗ್ರಾಮದಲ್ಲಿರುವ ಶಂಭುಲಿಂಗೇಶ್ವರ ದೇವಾಲಯದಲ್ಲಿ ಅಸ್ಮೃಶ್ಯತೆ ಆಚರಿಸದಂತೆ, ಪರಿಶಿಷ್ಟರಿಗೆ ದೇಗುಲ ‍‍ಪ್ರವೇಶಕ್ಕೆ ತಹಶೀಲ್ದಾರ್ ಮಹೇಶ್‌ ಆದೇಶಿಸಿದ್ದಾರೆ.

ದೇಗುಲವು ಮುಜರಾಯಿ ಇಲಾಖೆಗೆ ಸೇರಿದ್ದು, ಪರಿಶಿಷ್ಟ ಜಾತಿ ಸಮುದಾಯದ ನವೀನ್ ಎಂಬುವರು ದೇವಾಲಯಕ್ಕೆ ಪ್ರವೇಶಾವಕಾಶ ನೀಡುತ್ತಿಲ್ಲ ವೆಂದು ಆರೋಪಿಸಿ ದೂರು ನೀಡಿದ್ದರು. ಜಿಲ್ಲಾಧಿಕಾರಿ ಸೂಚನೆಯಂತೆ ತಹಶೀಲ್ದಾರ್ ಮಹದೇವ ಅವರು ಗ್ರಾಮಸ್ಥರೊಂದಿಗೆ ಸಭೆ ನಡೆಸಿ, ಸಮುದಾಯವರಿಗೆ ದೇವಸ್ಥಾನಕ್ಕೆ ಪ್ರವೇಶ ಕಲ್ಪಿಸಿದರು.

ಉಪ ತಹಶೀಲ್ದಾರ್ ಲತಾ ಶರಣಮ್ಮ, ಪಿಎಸ್‌ಐ ಚೇತನ್, ಗ್ರಾಮದ ಆಡಳಿತಾಧಿಕಾರಿಗಳಾದ ಕೀರ್ತಿಕುಮಾರ್ ಮತ್ತು ಅಬ್ದುಲ್ ರಶೀದ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT