‘ವರ್ತಮಾನಕ್ಕೆ ತಕ್ಕಂತೆ ಮೌಲ್ಯ ಬಳಸಿ’
ಮೈಸೂರು: ‘ಪರಂಪರೆ ಹಾಗೂ ಸಂಪ್ರದಾಯದ ಉತ್ತಮ ಮೌಲ್ಯ ಗಳನ್ನು ವರ್ತಮಾನದ ಅಗತ್ಯಕ್ಕೆ ಅನುಗುಣ ವಾಗಿ ಬಳಸ ಬೇಕಿದೆ. ಮರುಹುಟ್ಟು ಧಮ್ಮದ ಹೊಸ ಅನುಸಂಧಾನ’ ಎಂದು ವಿಮರ್ಶಕ ರಹಮತ್ ತರೀಕೆರೆ ಪ್ರತಿಪಾದಿಸಿದರು. ಬೌದ್ಧ ಮಹಾ ಸಮ್ಮೇಳನದಲ್ಲಿ ‘ಪರಂಪರೆಯ ಕೊಳಕು ಹಾಗೂ ಆಧುನಿಕ ವಿಕಾರಗಳೆರಡಕ್ಕೂ ಬುದ್ಧನೇ ದಿವ್ಯೌಷಧ’ ಉಪನ್ಯಾಸದಲ್ಲಿ ಮಾತನಾಡಿದರು. ‘ಸಂಪ್ರದಾಯದೊಂದಿಗೆ ಎಲ್ಲಾ ಕಾಲದಲ್ಲೂ ಜಗಳಗಳು ನಡೆದಿವೆ. ಕೊಳಕಿನ ವಿರುದ್ಧ ಆಯಾಯ ದೇಶದ ಚಿಂತಕರು ಹೋರಾಡಿ ದ್ದಾರೆ. ಬುದ್ಧ ತಿಳಿಸಿದ ಪ್ರಜ್ಞೆ ಹಾಗೂ ಮೈತ್ರಿಯು ಸಮಾಜವನ್ನು ಅರ್ಥೈಸಲು ಸಹಾಯಕ. ಮೈತ್ರಿ ಕಳೆದುಕೊಂಡ ಜನ ಇರುವ ದೇಶ ಮುಂದುವರಿಯುವುದು ಅಸಾಧ್ಯ’ ಎಂದು ಅಭಿಪ್ರಾಯಪಟ್ಟರು. ತಿ.ನರಸೀಪುರದ ಭಂತೆ ಬೋಧಿ ರತ್ನ, ಭಾಗ್ಯಲಕ್ಷ್ಮಿ ಶ್ರೀನಿವಾಸ ಪ್ರಸಾದ್, ಚಿಂತಕ ಬಸವರಾಜ್ ದೇವನೂರು ಇದ್ದರು.